

ಕಳಸ: ತಾಪಂ ಕಾರ್ಯಾಲಯದ ಸಭಾಂಗಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ನಡೆಯಿತು.
ತಹಸೀಲ್ದಾರ್ ಯು.ಎಸ್.ಕಾವ್ಯಾ, ಕಳಸ ಗ್ರಾಪಂ ಅಧ್ಯಕ್ಷೆ ಸುನೀತಾ ಕುಮಾರಿ, ಉಪಾಧ್ಯಕ್ಷ ಕೆ.ಕೆ.ಭಾಸ್ಕರ, ಗ್ಯಾರಂಟಿ ಯೋಜನೆ ಅಧ್ಯಕ್ಷ ಗಣೇಶ್ ಭಟ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಶ್ರದ್ಧಾ, ಸೌಜನ್ಯಾ, ಜುಲೈಕಾ ಫಿಜಾ, ದೀಕ್ಷಿತಾ ಹಾಗೂ ಸಂಗೀತದಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದ ಪ್ರಣಮ್ಯ ಡೋಂಗ್ರೆ ಅವರನ್ನು ತಾಲೂಕು ಆಡಳಿತದಿಂದ ಗೌರವಿಸಲಾಯಿತು. ಡಾ. ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಹಸಲರ ಸಂಘದಿಂದ ಆಚರಿಸಲಾಯಿತು. ಕಳಸದ ಶಿವ ನಗರದ ಗ್ರಾಮಸ್ಥರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆೆ ಸಲ್ಲಿಸುವ ಮೂಲಕ ಆಚರಿಸಿದರು. ಕೆಂಗನಕೊಂಡದಲ್ಲಿ ಕುದುರೆಮುಖ ರೈತ ಸಂಘದಿಂದ ಜನ್ಮ ಆಚರಿಸಿದರು. ಸಂಸೆ ಗ್ರಾಪಂ ಸದಸ್ಯ ಶಂಕರೇಗೌಡ, ಚಂದ್ರಪ್ಪ, ಗುರು ರಾಜೇಶ್, ಶ್ರೀನಿವಾಸ, ವಕೀಲ ಅನಂತೇಶ್ ಇದ್ದರು.