

ಕಡೂರು: ವಿದ್ಯಾರ್ಥಿಗಳು ಓದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಸಿದ್ದರಾಜುನಾಯ್ಕ ತಿಳಿಸಿದರು.
ಪಟ್ಟಣದ ನೇತಾಜಿ ಮಾಡೆಲ್ ಇಂಗ್ಲಿಷ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ನೇತಾಜಿ ಸಾಂಸ್ಕೃತಿಕ ಸಂಗಮ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಮೊಬೈಲ್ ಮತ್ತು ಟಿವಿಯಿಂದ ದೂರ ಉಳಿದು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿದಲ್ಲಿ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಾಧ್ಯ ಎಂದರು.
ಶಾಲೆಯ ಆಡಳಿತ ಮಂಡಳಿಯು ಲಿತಾಂಶದ ಕಡೆ ಹೆಚ್ಚು ಗಮನಹರಿಸುತ್ತಿದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ವಿದ್ಯಾರ್ಥಿಗಳು ಗಮನಹರಿಸಬೇಕು ಎಂದರು.
ಶಾಲೆ ಕಾರ್ಯದರ್ಶಿ ಸಿ.ಎನ್.ಕಲ್ಲೇಶಪ್ಪ ಉಪನ್ಯಾಸ ನೀಡಿದರು. ಬಿಆರ್‌ಸಿ ಪ್ರೇಮ್‌ಕುಮಾರ್, ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಕೆ.ಮಂಜುನಾಥ್, ಪ್ರಾಚಾರ್ಯ ಜಿ.ಎಂ.ರವಿಕುಮಾರ್, ಪುರಸಭಾ ಸದಸ್ಯ ಜಿ.ಸೋಮಯ್ಯ, ಶಾಲೆಯ ಆಡಳಿತ ಮಂಡಳಿ ಪದಾಧಿಕಾರಿಗಳಾದ ಕೆ.ಎಂ.ಜಯಣ್ಣ, ಜಿ.ಸರೋಜಾ ಗಂಗಾಧರಯ್ಯ, ಜಿ.ಆರ್.ರೇವಣಸಿದ್ದಪ್ಪ, ಜಿ.ಕೆ.ಉಮಾಶಂಕರ್, ಚನ್ನಬಸಮ್ಮ, ಪುರಸಭಾ ಮಾಜಿ ಉಪಾಧ್ಯಕ್ಷ ಡಿಶ್ ಮಂಜುನಾಥ್, ಶಿಕ್ಷಕರು ಇದ್ದರು.