

ಚಿತ್ರದುರ್ಗ: ವಿಜ್ಞಾನದಿಂದ ನಮ್ಮ ಜೀವನ ಶೈಲಿಯೇ ಬದಲಾಗಿದ್ದು, ವಿಜ್ಞಾನ ಮೇಳಗಳು ಮಕ್ಕಳ ಮನಸ್ಸಿನ ವಿಕಾಸಕ್ಕೆ ಕಾರಣವಾಗುತ್ತವೆ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್‌ಎಸ್‌ಟಿ ಸ್ವಾಮಿ ಅಭಿಪ್ರಾಯಪಟ್ಟರು.
ನಗರದ ನ್ಯಾಷನಲ್ ಇಂಗ್ಲಿಷ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಸೈನ್ಸ್ ಎಕ್ಸ್ ಪೋ’ ವಿಜ್ಞಾನ ಹಬ್ಬ ಉದ್ಘಾಟಿಸಿ ಮಾತನಾಡಿ, ವೈಜ್ಞಾನಿಕ ಸಂಶೋಧನೆಗಳು ಸಮಾಜಕ್ಕೆ ಅನುಕೂಲವಾಗಿವೆ. ಈ ಮೇಳದಲ್ಲಿರುವ ಮಾದರಿಗಳು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರದರ್ಶನವಾಗುವಂತಾಗಲಿ ಎಂದು ಆಶಿಸಿದರು.
ಸಂಸ್ಥೆ ಆಡಳಿತಾಧಿಕಾರಿ ಸೈಯದ್‌ಅಕ್ತರ್ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಜ್ಞಾನಿಗಳ ಸಾಧನೆಗಳು ಪರಿಚಯವಾಗಬೇಕು ಎಂದರು.
ಸಂಸ್ಥೆ ನಿರ್ದೇಶಕ ಸೈಯದ್ ಶುಜತ್, ವ್ಯವಸ್ಥಾಪಕರಾದ ಇಮ್ರಾನ್‌ಸೈಫ್, ಪ್ರಾಚಾರ್ಯೆ ರುಕಿಯಾ ಖಾನಂ, ಉಪ ಪ್ರಾಚಾರ್ಯೆ ಶಹನಾಜ್, ಶಿಕ್ಷಕಿಯರಾದ ದಿವ್ಯಾ, ಮೊಹಸೀನಾ, ಸಾಜೀದ ಇದ್ದರು.