ವಸತಿ ಶಾಲೆಗಳಿಂದ ಗುಣಮಟ್ಟದ ಶಿಕ್ಷಣ

17 ajp 2 srinivas
ಶಿವನಿ ಹೋಬಳಿ ತಿಮ್ಮಾಪುರದ ಬಳಿ ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಪಂಪಾಪತಿ, ದೇವಗಿರಿ, ಗುರುಮೂರ್ತಿ, ಬಿ.ಜೆ.ಸವಿತಾ, ಜೀವನ್ ಕುಮಾರ್, ರತ್ನಮ್ಮ, ನಾಗರಾಜ್ ಇದ್ದರು.
Published on

ಪಂಚನಹಳ್ಳಿ: ಹಿಂದುಳಿದ ವರ್ಗದ ಬಾಲಕಿಯರಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಸತಿ ಶಾಲೆಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಶಿವನಿ ಹೋಬಳಿ ತಿಮ್ಮಾಪುರದ ಬಳಿ ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಅಂಬೇಡ್ಕರ್ ವಸತಿ ಶಾಲೆ 2017-18ರ ಶೈಕ್ಷಣಿಕ ಸಾಲಿನಲ್ಲಿ ಆರಂಭಗೊಂಡಿತು. ಈವರೆಗೆ ಶಿವನಿ ಗ್ರಾಮದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಪ್ರಸ್ತುತ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 16.6 ಕೋಟಿ ರೂ. ಮಂಜೂರು ಮಾಡಿದ್ದು ಶೀಘ್ರ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ ಎಂದರು.

ಮುಖ್ಯ ರಸ್ತೆಯಿಂದ ವಸತಿ ಶಾಲೆ ಸಂಪರ್ಕಿಸುವ 0.6 ಕಿ.ಮೀ. ರಸ್ತೆಯನ್ನು ಸಿಸಿ ರಸ್ತೆಯಾಗಿ ಪರಿವರ್ತಿಸಲಾಗುವುದು. ಇದಕ್ಕೆ ರೈತರು ರಸ್ತೆ ಒತ್ತುವರಿ ತೆರವುಗೊಳಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಪಾಲಕ ಇಂಜಿನಿಯರ್ ಪಂಪಾಪತಿ, ವಸತಿ ಶಾಲೆ ಪ್ರಾಚಾರ್ಯ ದೇವಗಿರಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಗುರುಮೂರ್ತಿ, ಗ್ರಾಪಂ ಅಧ್ಯಕ್ಷರಾದ ಬಿ.ಜೆ.ಸವಿತಾ, ಜೀವನ್‌ಕುಮಾರ್, ಸದಸ್ಯೆ ರತ್ನಮ್ಮ, ಪಿಡಿಒ ನಾಗರಾಜ್ ಇದ್ದರು.

ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net