ವರ್ಷದೊಳಗೆ ಹುತ್ತೂರು ಹೋಬಳಿಯ ಸಮಗ್ರ ಅಭಿವೃದ್ಧಿಗೆ ಬದ್ದ / ಅಂಬೇಡ್ಕರ್ ವಸತಿ ಶಾಲೆಗೆ ೨೫ ಕೋಟಿ ಮಂಜೂರು / ಶಾಸಕ ಎಸ್.ಎನ್ ನಾರಾಯಣಸ್ವಾಮಿ,

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ತಾಲೂಕಿನ ಹುತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಸುಮಾರು ೨೫ ಕೋಟಿ ವೆಚ್ಚದ ೧೦ ಎಕರೆಗಳಷ್ಟು ವಿಸ್ತೀರ್ಣದಲ್ಲಿ ೫೦೦ ವಿಧ್ಯಾರ್ಥಿಗಳ ಅಂಬೇಡ್ಕರ್ ವಸತಿ ಶಾಲೆ ಮಂಜೂರು ಮಾಡಿಸಲಾಗುತ್ತದೆ ಎಂದು ಶಾಸಕ ಹಾಗೂ ಕೋಮುಲ್ ನಿರ್ದೇಶಕ ಎಸ್.ಎನ್ ನಾರಾಯಣಸ್ವಾಮಿ ತಿಳಿಸಿದರು.

ತಾಲೂಕಿನ ಹುತ್ತೂರು ಗ್ರಾಮದಲ್ಲಿ ಭಾನುವಾರ ನೂತನ ಡೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಈ ಭಾಗದ ಜನತೆ ನನಗೆ ನಾಲ್ಕು ಬಾರಿ ಮತ ನೀಡಿ, ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನಿಮ್ಮಗಳ ಹಾಗೂ ವಿಶೇಷವಾಗಿ ಹೆಣ್ಣು ಮಕ್ಕಳ ಋಣ ನನ್ನ ಮೇಲಿದೆ. ಈ ಭಾಗದಲ್ಲಿನ ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಬೇಕು ಎಂಬುದು ಕಾಂಗ್ರೆಸ್ ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ಜಿಲ್ಲೆಗೆ ಒಂದು ಅಂಬೇಡ್ಕರ್ ವಸತಿ ಶಾಲೆಯ ಮಂಜೂರು ಆಗಿದ್ದು, ಅದನ್ನು ಹುತ್ತೂರು ಹೋಬಳಿಗೆ ನೀಡಿದ್ದೇನೆ ಎಂದರು.

ಹುತ್ತೂರು ಹೋಬಳಿಯ ಪ್ರತಿಯೊಂದು ಗ್ರಾಮದಲ್ಲಿ ಸಂಪರ್ಕ ರಸ್ತೆಗಳ ನಿರ್ಮಾಣ ಹಾಗೂ ಸಿಮೆಂಟ್ ರಸ್ತೆಗಳಿಗೆ ಸುಮಾರು ೧೦ ಕೋಟಿ ಅನುದಾನ ಮೀಸಲಿಡಲಾಗಿದೆ. ಅದನ್ನು ನಿಮ್ಮ ಗ್ರಾಮದಲ್ಲಿ ಚರ್ಚೆ ಮಾಡಿ ಯಾವುದಕ್ಕೆ ಅವಶ್ಯಕತೆ ಇದೆ ಅದಕ್ಕೆ ಬಳಸಿಕೊಳ್ಳಿ. ಪ್ರತಿ ಗ್ರಾಮಕ್ಕೆ ಕನಿಷ್ಠ ೧೦ ರಿಂದ ೨೦ ಲಕ್ಷ ಸಿಮೆಂಟ್ ರಸ್ತೆ ನಿರ್ಮಿಸಿ ಉಳಿದಿದ್ದು, ಡಾಂಬರ್ ರಸ್ತೆ ನಿರ್ಮಾಣ ಮಾಡಿಸಿ, ನಾನು ಶಾಸಕನಾದ ಮೇಲೆ ಈ ಭಾಗದಲ್ಲಿ ಮೂರು ನಾಲ್ಕು ಬಾರಿ ರಸ್ತೆಗಳನ್ನು ದುರಸ್ಥಿ ಮಾಡಿಸಿದ್ದೇನೆ. ಆದರೂ ಕಿತ್ತುಹೋಗಿದೆ, ಆದರೂ ಸಹ ಮತ್ತೊಂದು ಬಾರಿ ರಸ್ತೆ ಹಾಕಿಸುತ್ತೇನೆ. ಬಿಜೆಪಿ ಸರ್ಕಾರವಿದ್ದಾಗ ಒಂದು ಹಿಡಿಯಷ್ಟು ಮಣ್ಣು ಏನಾದರೂ ಹಾಕಿದ್ದಾರೆ. ತೋರಿಸಲಿ ಎಂದು ಸವಾಲಾಕಿದರು.

ರಾಜಕೀಯ ನಿಂತ ನೀರಲ್ಲ, ಚಲುಸುವ ಮೋಡಗಳು ಇದ್ದಂತೆ. ಹಿಂದೆ ಎಷ್ಟೋ ಜನ ಕೂಡಿ ಬೇರೆ ಬೇರೆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಅದೇ ರೀತಿ ಕೋಮುಲ್ ನಿರ್ದೇಶಕ ವಡಗೂರು ಹರೀಶ್ ಕೂಡ ತವರು ಮನೆಗೆ ಬರುವುದು ತಪ್ಪಲ್ಲ. ಎಲ್ಲಿ ಗೌರವ ಸಿಗುತ್ತೇ ಅಲ್ಲಿ ಇದ್ದರೆ ಸೂಕ್ತ. ಈಭಾಗದಲ್ಲಿ ಸೋಲಾರ್ ವಿದ್ಯುತ್ ನಿರ್ಮಾಣಕ್ಕಾಗಿ ರಸ್ತೆ ಮುಚ್ಚಲು ಹೊರಟಿದ್ದರು. ಅದನ್ನು ರದ್ದು ಮಾಡಿ ಅದೇ ರಸ್ತೆ ಅಭಿವೃದ್ಧಿಗೆ ೬೦ ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಹುತ್ತೂರು ಗ್ರಾಮದಲ್ಲಿ ಡೇರಿ ಕಟ್ಟಡ ಕಟ್ಟಲು ನನ್ನ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮದಿಂದ ೧೦ ಲಕ್ಷ, ಕೋಮುಲ್‌ನಿಂದ ೩ ಲಕ್ಷ, ಕೆಎಂಎಫ್ ೪.೫೦ ಲಕ್ಷ ಧರ್ಮಸ್ಥಳ ಸಂಘದಿAದ ೧.೫೦ ಲಕ್ಷ ಅನುದಾನ ಬಿಡುಗಡೆ ಮಾಡಿಸಿ, ಮುಂದಿನ ವರ್ಷದೊಳಗೆ ಹೊಸ ಕಟ್ಟಡ ನಿರ್ಮಾಣ ಮಾಡಿಸಲಾಗುತ್ತದೆ ಎಂದರು.

ಕೋಮುಲ್ ನಿರ್ದೇಶಕ ವಡಗೂರು ಡಿ.ವಿ ಹರೀಶ್ ಮಾತನಾಡಿ, ಗ್ರಾಮೀಣ ಜನತೆಯ ಆದಾಯದ ಮೂಲ ಹೈನುಗಾರಿಕೆಯಾಗಿದೆ. ಇಂದು ಹಾಲು ಉತ್ಪಾದಕರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಕೋಮುಲ್‌ನಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ನನ್ನನ್ನು ಸೇರಿದಂತೆ ತನಿಖೆ ನಡೆಸಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.

ಕೋಮುಲ್ ಉಪ ವ್ಯವಸ್ಥಾಪಕ ಡಾ.ಆರ್.ಮಹೇಶ, ಹುತ್ತೂರು ಡೇರಿ ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಶ್ರೀಲಕ್ಷ್ಮೀ, ಕಾಂಗ್ರೆಸ್ ಮುಖಂಡರಾದ ಹರಳಕುಂಟೆ ವೆಂಕಟೇಶ್, ಮಲ್ಲಂಡಹಳ್ಳಿ ಬಾಬು, ಚಲಪತಿ, ನಂದAಬಳ್ಳಿ ವಿಜಿಕುಮಾರ್, ತಿಮ್ಮಸಂದ್ರ ಶ್ರೀನಿವಾಸ್, ವಿಟ್ಟಪ್ಪನಹಳ್ಳಿ ಸುನಿಲ್, ಉದಯ್, ಮೋಹನ್, ಮುಂತಾದವರು ಇದ್ದರು.

ಚಿತ್ರ ೦೭ ಕೆ.ಎಲ್.ಆರ್. ೦೮ : ಕೋಲಾರ ತಾಲ್ಲೂಕು ಹುತ್ತೂರು ಗ್ರಾಮದಲ್ಲಿ ನೂತನ ಡೈರಿಯನ್ನು ಹಾಲು ಪರೀಕ್ಷೆ ಮಾಡುವ ಮೂಲಕ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಉದ್ಘಾಟಿಸಿದರು. ಕೋಮುಲ್ ನಿರ್ದೇಶಕ ವಡಗೂರು ಡಿ.ವಿ.ಹರೀಶ್, ಕೋಮುಲ್ ಉಪವ್ಯವಸ್ಥಾಪಕ ಡಾ.ಆರ್.ಮಹೇಶ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net