

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಕ್ಫೃ್ಗೆ ಸಾರ್ವಜನಿಕರ ಆಸ್ತಿ ಬರೆದು ಕೊಡುವ ಕೆಲಸ ಮಾಡುತ್ತಿದೆ. ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಎಕರೆ ಜಮೀನನ್ನು ವಕ್ಫೃ್ ತನ್ನ ಆಸ್ತಿ ಎಂದು ಪ್ರಕಟಿಸಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ 12 ತಾಲೂಕುಗಳು ಸೇರಿದಂತೆ ಹಲವೆಡೆ ವಕ್ಫೃ್ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದು, 1965 ನವೆಂಬರ್ 4ರ ಗೆಜೆಟ್ ನೋಟಿಫಿಕೇಷನ್ ಅನ್ವಯ ಮೈಸೂರು ಜಿಲ್ಲೆಯಲ್ಲಿ 443 ಎಕರೆ, ಚಾಮರಾಜನಗರ ಜಿಲ್ಲೆಯಲ್ಲಿ 175 ಎಕರೆ ಭೂಮಿಯನ್ನು ತನ್ನದು ಎಂದು ವಕ್ಫ್ ಘೋಷಿಸಿಕೊಂಡಿದೆ. ಎಲ್ಲೆಲ್ಲಿ ಸರ್ಕಾರದ ಜಾಗ ಇದೆಯೊ, ಖಾಲಿ ಜಮೀನು ಇದೆಯೋ ಅಲ್ಲೆಲ್ಲ ವಕ್ಫ್‌ನವರು ಗೆಜೆಟ್ ನೋಟಿಫಿಕೇಷನ್ ಕೊಟ್ಟಿದ್ದಾರೆ. ಆದರೆ, ನೋಟಿಫಿಕೇಷನ್‌ನಲ್ಲಿ ಇದುವರೆಗೆ ಯಾವುದೇ ಬೆಳವಣಿಗೆ ಆಗಿಲ್ಲ. ನಂತರ ಸಿದ್ದರಾಮಯ್ಯ ಸಿಎಂ ಆದಾಗ ಅವರಿಗೆ ವಕ್ಫೃ್ ವಿಚಾರ ಮುನ್ನೆಲೆಗೆ ಬಂದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರೈತರ ಕೃಷಿ ಭೂಮಿ, ಮಠಗಳ ಆಸ್ತಿ ಸೇರಿದಂತೆ ಹಲವರ ಆಸ್ತಿಗಳನ್ನು ವಕ್ಫೃ್ ಕಬಳಿಸುತ್ತಿದೆ. ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಈ ರೀತಿ ನಡೆಯುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಈ ಸಂಬಂಧ ರಾಜ್ಯದಲ್ಲಿ ಈಗಾಗಲೇ ಹೋರಾಟ ಶುರುವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಸಮಸ್ಯೆ ಎದುರಾಗಿದ್ದು, ಇದರಿಂದಾಗಿ ರಾಜ್ಯದ ರೈತರು ಕಂಗಾಲಾಗಿದ್ದಾರೆ. ಯಾವಾಗ ರೈತರ ಭೂಮಿ ಕಬಳಿಕೆ ಆಗಲಿದೆ ಎಂಬುದೇ ತಿಳಿಯದಂತಾಗಿದೆ. ತಲತಲಾಂತರದಿಂದ ಇರುವ ರೈತರ, ಮಠಗಳ ಆಸ್ತಿಗಳು ವಕ್ಫ್ ಆಸ್ತಿಗಳಾಗಿ ಬದಲಾಗುತ್ತಿವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬಹುಸಂಖ್ಯಾತ ಹಿಂದುಗಳಿಗೆ ಆತಂಕ ಶುರುವಾಗಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಗಳ ಭೂಮಿ ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ವಕ್ಫ್ ಆಸ್ತಿ ವಿಚಾರವಾಗಿ ರೈತರಿಗೆ ನೀಡಿದ್ದ ನೋಟಿಸ್‌ಗಳನ್ನು ವಾಪಸ್ ಪಡೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ, ನೋಟಿಸ್ ವಾಪಸ್ ಪಡೆದುಕೊಳ್ಳುವುದಕ್ಕೂ, ಗೆಜೆಟ್ ನೋಟಿಫಿಕೇಶನ್ ಹೊರಡಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಮೈಸೂರು ಜಿಲ್ಲೆಯ ಪೈಕಿ ತಿ. ನರಸೀಪುರ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಭೂಮಿ ವಕ್ಫ್‌ಗೆ ನೀಡಲಾಗಿದೆ. ತುಂಡು ಭೂಮಿ, ಸರ್ಕಾರಿ ಜಾಗವನ್ನು ಯಾರಿಂದಲೂ ನೀಡಲು ಸಾಧ್ಯವಿಲ್ಲ. ಆದರೆ, ಈಗ ವಕ್ಫೃ್ ಬೋರ್ಡ್‌ಗೆ ಹೇಗೆ ಈ ಜಾಗ ಹಸ್ತಾಂತರಿಸಲಾಗಿದೆ. 1965ರಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದರೂ ಅಂದು ಆ ಜಾಗ ಪಡೆದುಕೊಳ್ಳಲು ವಕ್ಪ್‌ಗೆ ಆಗಿರಲಿಲ್ಲ. ಆದರೆ ಸಿದ್ದರಾಮಯ್ಯ ಸಿಎಂ ಆದಾಗ ಅದನ್ನು ವಶಪಡಿಸಿಕೊಳ್ಳಲಿಕ್ಕೆ ವಕ್ಫೃ್ ಬೋರ್ಡ್ ಮುಂದಾಗಿದೆ ಎಂದು ಕಿಡಿಕಾರಿದರು.
ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಮೈಸೂರು, ಚಾಮರಾಜನಗರ, ಮಡಿಕೇರಿ ಭಾಗದಲ್ಲಿ ನಾವು ಹೋರಾಟ ಮಾಡಲಿದ್ದು, ಪಕ್ಷದಿಂದಲೂ ಈಗಾಗಲೇ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದರು.
ವಕ್ಫೃ್ ವಿರುದ್ಧದ ಹೋರಾಟದಲ್ಲಿ ತಮ್ಮ ಹೆಸರು ಕೈ ಬಿಟ್ಟ ವಿಚಾರಕ್ಕೆ ಪ್ರತಿಯಿಸಿ, ನನಗೆ ಯಾವುದೇ ಬಣ ಇಲ್ಲ. ಮೋದಿ ಅವರು ಬಿಜೆಪಿ ಕಾರ್ಯಕರ್ತ ಹೇಗೋ ಹಾಗೆ ನಾನು ಕೂಡ ಬಿಜೆಪಿ ಕಾರ್ಯಕರ್ತ. ನಾನು ಜನರ ಕೆಲಸ ಮಾಡಲಿಕ್ಕೆ ಬಂದಿರೋನು. ಜನರು ಮನಸ್ಸಿನಲ್ಲಿ ನನಗೆ ಸ್ಥಾನ ಕೊಟ್ಟಿದ್ದಾರೆ. ಅಧಿಕಾರ ಇರಲಿ, ಬಿಡಲಿ ಜನರ ಪರವಾಗಿ ಹೋರಾಟ ಮಾಡುತ್ತೇನೆ. ವಕ್ಫೃ್ ವಿರುದ್ಧವಷ್ಟೇ ನನ್ನ ಹೋರಾಟ ಎಂದರು.