ವಕೀಲನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪಂಜಿನ ಮೆರವಣಿಗೆ

HUN-OCT-17-1(DSS STRIKE)
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಕಡೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ, ಸಿಪಿಎಂ, ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹುಣಸೂರಿನಲ್ಲಿ ಗುರುವಾರ ಸಂಜೆ ಪಂಜಿನ ಮೆರವಣಿಗೆ ನಡೆಸಲಾಯಿತು.
Published on

ಹುಣಸೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಕಡೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ, ಸಿಪಿಎಂ, ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದಲ್ಲಿ ಗುರುವಾರ ಸಂಜೆ ಪಂಜಿನ ಮೆರವಣಿಗೆ ನಡೆಸಲಾಯಿತು.

ನಗರದ ಸಂವಿಧಾನ ಸರ್ಕಲ್‌ನಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಕಲ್ಪತರು ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಸಿಸಲಾಯಿತು. ಮರಳಿ ಸಂವಿಧಾನ ವೃತ್ತದಲ್ಲಿ ಮೆರವಣಿಗೆ ಸಂಪನ್ನಗೊಂಡಿತು.

ಮೆರವಣಿಗೆಗೆ ಚಾಲನೆ ನೀಡಿದ ಹಿರಿಯ ದಲಿತ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ತಲೆತಲಾಂತರಗಳಿಂದ ಶೋಷಣೆಗೊಳಗಾದ ದಲಿತರ ಏಳ್ಗೆಯನ್ನು ಸಹಿಸದ ಸನಾತನವಾದಿಗಳು ಇಂತಹ ಹೀನ ಕೃತ್ಯದ ಮೂಲಕ ದಲಿತ ವರ್ಗದ ಆತ್ಮ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ನಡೆಸುತ್ತಿದ್ದು, ಇಂತಹ ಗೊಡ್ಡು ಬೆದರಿಕೆಗಳಿಗೆ ಎಲ್ಲರೂ ಒಗ್ಗಟ್ಟಿನ ಮೂಲಕ ತಕ್ಕ ಉತ್ತರ ಕೊಡಬೇಕಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್ ಮಾತನಾಡಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮೇಲೆ ನಡೆದಿರುವ ಈ ಕೃತ್ಯ ಖಂಡನೀಯ. ಇಂತಹ ಕೃತ್ಯಗಳ ವಿರುದ್ಧ ಸಂವಿಧಾನ ಪ್ರೇಮಿಗಳು ಒಗ್ಗಟ್ಟಾಗಿ ಹೊರಾಡಬೇಕಾದ ಸನ್ನಿವೇಶ ಎದುರಾಗಿದೆ ಎಂದರು.

ವಕೀಲ ಪುಟ್ಟರಾಜು, ಕಿರಂಗೂರು ಸ್ವಾಮಿ, ರಾಮಕೃಷ್ಣ ಅತ್ತಿಕುಪ್ಪೆ, ವಿ.ಬಸವರಾಜು ಕಲ್ಕುಣಿಕೆ, ದಸಂಸ ಮುಖಂಡರಾದ ಶಿವರಾಜು ಮುತ್ತುರಾಯನಹೊಸಳ್ಳಿ, ರಾಜು ಚಿಕ್ಕ ಹುಣಸೂರು, ಸಿದ್ದೇಶ್ ಅತ್ತಿಕುಪ್ಪೆ, ಗೌರಿಪುರ ವೆಂಕಟೇಶ್, ರಾಜಪ್ಪ, ಚಿಕ್ಕಸ್ವಾಮಿ, ಮಂಟಿ ಕೊಪ್ಪಲು ಕುಮಾರ, ರತ್ನಪುರಿ ಪುಟ್ಟಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಅಮರ್‌ನಾಥ್, ರೇಣುಕಾ ದಯಾನಂದ, ರಾಧಾಕೃಷ್ಣ ವೀರಭದ್ರ, ಚಲುವರಾಜು. ಮೋದೂರು ಮಹೇಶ್, ಪ್ರಕಾಶ್, ಶಿವಣ್ಣ, ಎಚ್.ಡಿ.ಬೀರೇಶ್ವರ್, ರಾಮೇಗೌಡ ಅಗ್ರಹಾರ, ಬೀರನಹಳ್ಳಿ ಪುಟ್ಟರಾಜು, ಬಿಳಿಕೆರೆ ಬಸವರಾಜು. ಅಭಿ, ಮೂಕನಹಳ್ಳಿ ಸಂಜು, ಮಧು, ಪ್ರಸನ್ನ, ಹರೀಶ ಬೀಜಗನಹಳ್ಳಿ ಮುಂತಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net