

ರೋಟರಿ ಮೈಸೂರು ಉತ್ತರ ಹಾಗೂ ಕದಂಬ ರಂಗ ವೇದಿಕೆ ವತಿಯಿಂದ ಕೊಡಮಾಡುವ ರೋಟರಿ ಕದಂಬ ರಂಗ ಪ್ರಶಸ್ತಿಗೆ ಈ ಬಾರಿ ಯು.ಎಸ್.ರಾಮಣ್ಣ, ಅಶ್ವತ್ಥ್ ಕದಂಬ, ಎನ್.ಧನಂಜಯ ಹಾಗೂ ದಿಶಾ ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜ.17ರಂದು ಸಂಜೆ 6 ಗಂಟೆಗೆ ನಗರದ ಜೆಎಲ್‌ಬಿ ರಸ್ತೆಯ ಇಂಜಿನಿಯರ್ಸ್ ಸಂಸ್ಥೆಯ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನಟ ಮಂಡ್ಯ ರಮೇಶ್ ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.ತಿಪ್ಪಣ್ಣ, ಪ್ರತಾಪ್, ನಾಗೇಂದ್ರ ಕುಮಾರ್ ಇದ್ದರು.