ರೈತರು, ಕೂಲಿ ಕಾರ್ಮಿಕರಿಗೆ ಸಹಕಾರ

sangha
ಜಯಪುರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಡಿ.ಬಿ.ರಾಜೇಂದ್ರ ಉದ್ಘಾಟಿಸಿದರು. ಜಯಲಕ್ಷ್ಮೀ, ಯಜ್ಞಮೂರ್ತಿ, ರಾಜೇಶ್, ವೆಂಕಟೇಶ್, ಣಿರಾಜ್ ಇತರರಿದ್ದರು.
Published on

ಜಯಪುರ: ಜಯಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಈ ಭಾಗದ ರೈತರು, ಕೂಲಿ ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳ ಆರ್ಥಿಕ ಬೆಳವಣಿಗೆಗೆ ಸಹಕಾರ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಡಿ.ಬಿ.ರಾಜೇಂದ್ರ ಹೇಳಿದರು.
ಜಯಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಘದ ಸರ್ವಸದಸ್ಯರ ಮಹಾಸಭೆಯಲ್ಲಿ ಮಾತನಾಡಿ, ಆಡಳಿತ ಮಂಡಳಿಯ ನಿರ್ದೇಶಕರ ಒಗ್ಗಟ್ಟು ಹಾಗೂ ಸದಸ್ಯರ ಸಹಕಾರದಿಂದ ಸಂಸ್ಥೆ ಲಾಭದಾಯಕವಾಗಿ ನಡೆಯುವ ಜತೆಗೆ ಷೇರುದಾರ ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.
ಸಹಕಾರ ಸಂಘ ಸುಮಾರು 1,402 ಸದಸ್ಯರನ್ನು ಹೊಂದಿದ್ದು, ಪ್ರತಿಯೊಬ್ಬರಲ್ಲೂ ಇದು ನಮ್ಮ ಸಂಸ್ಥೆ ಎಂಬ ಭಾವನೆ ಬೆಳೆದಿದೆ. ಆಡಳಿತ ಮಂಡಳಿ ಸದಸ್ಯರ ನಂಬಿಕೆಗೆ ಚ್ಯುತಿ ಬಾರದಂತೆ ಸಹಕಾರ ತತ್ವದಡಿ ಕಾರ್ಯಾಚರಿಸುತ್ತಿದೆ. 2022-23ನೇ ಸಾಲಿನಲ್ಲಿ ಸಂಘ ಸುಮಾರು 3.75 ಕೋಟಿ ರೂ. ವ್ಯವಹಾರ ನಡೆಸಿದೆ ಎಂದರು.
ಉಪಾಧ್ಯಕ್ಷೆ ಜಯಲಕ್ಷ್ಮೀ, ವ್ಯವಸ್ಥಾಪಕ ಶಂಕರ ಗೌಡ, ನಿರ್ದೇಶಕರಾದ ಯಜ್ಞಮೂರ್ತಿ, ಎಚ್.ಕೆ.ರಾಜೇಶ್, ಎ.ಆರ್.ವೆಂಕಟೇಶ್, ಡಿ.ಪಿ.ಹುಮಾಯೂನ್ ಕಬೀರ್, ಣಿರಾಜ್, ಎಸ್.ಜೆ.ಚಿನ್ನಯ್ಯ, ಡಿ.ಪಿ.ಹರೀಶ್ ಪೂಜಾರಿ, ಸುಜಾತಾ, ಶೇಖರ, ಗುರುಮೂರ್ತಿ ಕೆ.ಎಸ್.ರಾಜೇಶ್, ಲೀಲಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net