ರೈತ ಹೋರಾಟಗಳು ಬತ್ತದ ಗಂಗೆ ಇದ್ದಂತೆ

22sgr1 kagodu
ಸಾಗರದ ಎಪಿಎಂಸಿ ಪ್ರಾಂಗಣದ ರೈತ ಭವನದಲ್ಲಿ ಶಿವಮೊಗ್ಗ ಜಿಲ್ಲಾ ರೈತ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರವನ್ನು ಕಾಗೋಡು ತಿಮ್ಮಪ್ಪ ಉದ್ಘಾಟಿಸಿದರು. ಬಿ.ಆರ್.ಜಯಂತ್, ದಿನೇಶ್ ಶಿರವಾಳ, ರಮೇಶ್ ಕೆಳದಿ, ಜಗದೀಶ್ ಒಡೆಯರ್ ಇತರರಿದ್ದರು.
Published on

ಸಾಗರ: ಹೋರಾಟದ ಭೂಮಿಕೆಯಲ್ಲಿ ರೈತ ಸಂಘಗಳ ಪಾತ್ರ ಹಿರಿದು. ರೈತ ಹೋರಾಟಗಳು ಎಂದಿಗೂ ಬತ್ತದ ಗಂಗೆ ಇದ್ದಂತೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ಸಾಗರದ ಎಪಿಎಂಸಿ ಪ್ರಾಂಗಣದ ರೈತ ಭವನದಲ್ಲಿ ಮಂಗಳವಾರ ಶಿವಮೊಗ್ಗ ಜಿಲ್ಲಾ ರೈತ ಸಂಘದಿಂದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ರೈತರು ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುವಂತಾಗಬೇಕು. ರೈತ ಸ್ವಾವಲಂಬಿ ಬದುಕು ನಡೆಸುವಂತೆ ಆಗಬೇಕು. ರೈತ ಸಂಘದ ನಾಯಕತ್ವ ವಹಿಸಿಕೊಂಡವರು ಲಾಪೇಕ್ಷೆ ಇಲ್ಲದೆ ಹೋರಾಟದಲ್ಲಿ ತೊಡಗಿಕೊಂಡು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ದಿನೇಶ್ ಶಿರವಾಳ ನೇತೃತ್ವದಲ್ಲಿ ರೈತ ಸಂಘ ಅನೇಕ ಹೋರಾಟಗಳಲ್ಲಿ ಗುರುತಿಸಿಕೊಂಡಿದೆ. ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ನಿಟ್ಟಿನಲ್ಲಿ ಇನ್ನಷ್ಟು ಹೋರಾಟಗಳು ನಡೆಯಬೇಕು. ಸೈದ್ಧಾಂತಿಕ ಹೋರಾಟಗಳಿಗೆ ತಾರ್ಕಿಕ ಅಂತ್ಯ ಮುಟ್ಟಿಸುವ ಕೆಲಸ ಕೂಡ ಆಗಬೇಕು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಉಪಾಧ್ಯಕ್ಷ ರಮೇಶ್ ಕೆಳದಿ, ಜಗದೀಶ್ ಒಡೆಯರ್, ಗಣಪತಿ ಶಿರಳಗಿ, ಡಾ. ರಾಮಚಂದ್ರ, ಭದ್ರೇಶ್ ಬಾಳಗೋಡು, ಜಿ.ಟಿ.ಸತ್ಯನಾರಾಯಣ, ಜೀನೇಶ್‌ಕುಮಾರ್, ಕುಮಾರ ಗೌಡ, ಶಿವು ಮೈಲಾರಿಕೊಪ್ಪ, ಚಂದ್ರು ಶಿರಿವಂತೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net