ರೇಬಿಸ್ ಲಸಿಕೆ ಸೆ.೨೮ ರೊಳಗೆ ಶೇ.೧೦೦ ರಷ್ಟು ಸಾಧಿಸಲು ಗುರಿ / ಜಿಲ್ಲಾಧಿಕಾರಿ ಅಕ್ರಂ ಪಾಷಾ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಸೆಪ್ಟೆಂಬರ್ ೨೮ರಂದು ರೇಬಿಸ್ ದಿನಾಚರಣೆಯಿದ್ದು, ಅಷ್ಟರಲ್ಲಿ ಜಿಲ್ಲೆಯಲ್ಲಿ ಶೇ.೧೦೦ರಷ್ಟು ರೇಬಿಸ್ ಲಸಿಕೆ ಹಾಕುವುದನ್ನು ಪೂರ್ಣಗೊಳಿಸಬೇಕು ಹಾಗೂ ಶಾಲಾ ಕಾಲೇಜುಗಳು, ಕೊಳಚೆ ಪ್ರದೇಶ ಹಾಗೂ ಮೋರಾರ್ಜಿ ವಸತಿ ಶಾಲೆಗಳಲ್ಲಿ ಅಭಿಯಾನ ಕೈಗೊಳ್ಳುವಂತೆ ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಘಟಕ ಜಿಲ್ಲಾ ಸರ್ವೇಕ್ಷಣ ಸಮಿತಿಯಿಂದ ಆಯೋಜಿಸಿದ ಸಭೆಯನ್ನುದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ನಾಯಿಗಳ ಹಾವಳಿ ಎಚ್ಚರವಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾದರೆ ನಗರಸಭೆ ಆಯುಕ್ತರು, ಪಶುವೈಜ್ಞಾಧಿಕಾರಿ ಮತ್ತು ಮುಖ್ಯ ಪ್ರಾಣಿ ನಿರೀಕ್ಷಕರು ಹೊಣೆಗಾರರಾಗುತ್ತಾರೆಂದು ಎಂದು ಎಚ್ಚರಿಕೆ ನೀಡಿದರು.

ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣ ವಾಟ್ಸಪ್‌ಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಇಂದಿನಿAದಲೇ ಆರಂಭಿಸಿ ಎಂದರು. ಮಾರುಕಟ್ಟೆಗಳಲ್ಲಿ, ಚಿಕನ್, ಮಟನ್ ಅಂಗಡಿಗಳ ಸುತ್ತಮುತ್ತಲು ತ್ಯಾಜ್ಯ ಶೇಖರಣೆಯಾಗದಂತೆ ಎಚ್ಚರವಹಿಸಬೇಕೆಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಅಂಗಡಿಯವರಿಗೆ ಎಲ್ಲೆಂದರಲ್ಲಿ ಕಸ ಹಾಕದಂತೆ ಎಚ್ಚರಿಕೆ ನೀಡಿ ಸ್ವಚ್ಛತೆ ಕಾಪಾಡಲು ಜಾಗೃತಿ ಮೂಡಿಸಬೇಕೆಂದರು. ನಾಯಿಗಳ ಹಾವಳಿ ತಡೆಗಟ್ಟಲು ನಗರಸಭೆ ಪಶು ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿ ಸಾಮಾಜಿಕ ಸಮಸ್ಯೆಗೆ ಪರಿಹರಿಸಬೇಕೆಂದರು

ಜಿಲ್ಲೆಯಾದ್ಯಂತ ೧೮೯ ಜನಕ್ಕೆ ಹಾವು ಕಡಿತಕ್ಕೆ ಒಳಗಾಗಿದ್ದು, ಒಬ್ಬರು ಸಾವನ್ನಪ್ಪಿದ್ದರು ಕಂಡು ಬಂದಿದೆಯೆAದು ಡಾ. ಚಾರಿಣಿ ಮಾಹಿತಿ ನೀಡಿದರು. ಭಾರತ ಸರ್ಕಾರವು ಹಾವು ಕಡಿತ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ರಾಜ್ಯಕ್ಕೆ ೨೦೨೩-೨೪ರಲ್ಲಿ ಕಾರ್ಯಕ್ರಮಕ್ಕೆ ತರಬೇತಿ ಹಾಗೂ ಮೇಲ್ವಿಚಾರಣಿ ಹಾಗೂ ಸರ್ವೇಕ್ಷಣಗಾಗಿ ಅನುದಾನ ನೀಡಿ ಕ್ರಮಕೈಗೊಂಡಿರುತ್ತದೆ ಎಂದರು.

ಅಂಗನವಾಡಿ, ಹಾಸ್ಟೆಲ್‌ಗಳಂತಹ ಸಂಗ್ರಹಣಾ ಜಾಗಗಳಲ್ಲಿ ಇಲಿಗಳ ಕಾಟ ಜಾಸ್ತಿಯಾಗಿರುತ್ತದೆ. ಆದ್ದರಿಂದ ಸಂಗ್ರಹಣೆ ಅಥವಾ ಶೇಖರಣೆ ಮಾಡುವ ಸ್ಥಳಗಳನ್ನು ಸ್ವಚ್ಛವಾಗಿ ಇಡಬೇಕೆಂದರು. ಯಾವುದೇ ಪ್ರಾಣಿಗಳು ಕಚ್ಚಿದರೆ ತಕ್ಷಣ ತಂದೆ-ತಾಯಿ, ಪೋಷಕರು ಅಥವಾ ವೈದ್ಯರಿಗೆ ವರದಿ ಮಾಡುವಂತೆ ಮನವಿ ಮಾಡಿದರು. ಎಲ್ಲಾ ಇಲಾಖೆಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿದಾಗ ಈ ಪ್ರಾಣಿ ಕಡಿತದ ಪರಿಣಾಮಗಳನ್ನು ಹೊಡೆದೊಡಿಸಬಹುದು ಎಂದು ಡಾ.ಚಾರಣಿ ಅವರು ತಿಳಿಸಿದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ನಾರಾಯಣಸ್ವಾಮಿ, ಆರೋಗ್ಯಾಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ರ ೨೩ ಕೆ.ಎಲ್.ಆರ್. ೦೭ : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ರೇಬಿಸ್ ಲಸಿಕೆ ಹಾಗೂ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷ, ಡಿ.ಹೆಚ್.ಓ. ಡಾ.ಜಗದೀಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net