

ಚಿತ್ರದುರ್ಗ:ಹತ್ಯೆಯಾಗಿದ್ದ ರೇಣುಕಸ್ವಾಮಿಗೆ ಗಂಡು ಮಗು. ನಗರದ ಖಾಸಗಿ ನರ್ಸಿಂಗ್ ಹೋಂನಲ್ಲಿ ಬುಧವಾರ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಸ್ವಾಮಿ ಪತ್ನಿ ಸಹನಾ. ನಟ ದರ್ಶನ್ ಗ್ಯಾಂಗ್‌ನಿಂದ ರೇಣುಕಸ್ವಾಮಿಯನ್ನು ಹತ್ಯೆಗೈದಿರುವ ಆರೋಪ. ದುಃಖದ ಮಡು ವಿನಲ್ಲಿದ್ದ ಕುಟುಂಬಕ್ಕೆ ಸಂತಸ. ಮೊಮ್ಮಗನ ಜನನದ ಬಳಿಕ ಅಜ್ಜ ಕಾಶೀನಾಥ ಶಿವನಗೌಡ್ರ ಹೇಳಿಕೆ. ನಮ್ಮ ಮಗನೇ ಹುಟ್ಟಿ ಬಂದಷ್ಟು ಸಂತೋಷ ವಾಗಿದೆ. ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ತುಂಬಾ ಕಾಳಜಿ ವಹಿಸಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿಗೆ ನಾನು ಚಿರರುಣಿ ಎಂದಿದ್ದಾರೆ.