ರೂಪಶ್ರೀ ಅಧ್ಯಕ್ಷೆ, ಜ್ಯೋತಿ ಉಪಾಧ್ಯಕ್ಷೆ

09.. Pyp.01
ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯಾಗಿ ಆಯ್ಕೆಯಾದ ರೂಪಶ್ರೀ ಆನಂದ್ ಹಾಗೂ ಜ್ಯೋತಿ ದೇವರಾಜ್ ಅವರನ್ನು ಸದಸ್ಯರು ಹಾಗೂ ಮುಖಂಡರು ಅಭಿನಂದಿಸಿದರು. ಟಿ.ಈರಯ್ಯ, ರಫೀಕ್, ಲೋಹಿತ್, ಚೌಕೂರು ರವಿ, ರಮೇಶ್, ಸಣ್ಣ ನಂಜಯ್ಯ, ರಾಜಶೇಖರ್, ನಹಿಮ್, ನಂದೀಶ್ ಇದ್ದರು.
Published on

ಪಿರಿಯಾಪಟ್ಟಣ: ತಾಲೂಕಿನ ಪಂಚವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ರೂಪಶ್ರೀ ಆನಂದ್, ಉಪಾಧ್ಯಕ್ಷೆಯಾಗಿ ಜ್ಯೋತಿ ದೇವರಾಜ್ ಅವಿರೋಧವಾಗಿ ಆಯ್ಕೆಯಾದರು.

ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಬುಧವಾರ ಹಮ್ಮಿಕೊಂಡಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಚುನಾವಣಾ ಅಧಿಕಾರಿಯಾಗಿದ್ದ ಜಿಪಂ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಎಸ್.ವೀರಭದ್ರಶೆಟ್ಟಿ, ಮುಖಂಡರಾದ ಟಿ.ಈರಯ್ಯ, ರಫೀಕ್, ಲೋಹಿತ್, ಚೌಕೂರು ರವಿ, ರಮೇಶ್, ಸಣ್ಣನಂಜಯ್ಯ, ರಾಜಶೇಖರ್, ನಹಿಮ್, ನಂದೀಶ್, ದೇವರಾಜು, ಮಹದೇವ್, ಶಿವಣ್ಣ, ತ್ಯಾಗರಾಜು, ಸರ್ದಾರ್ ಪಾಷಾ, ಮುನಾವರ್, ಮಂಜು, ಚೆನ್ನಪ್ಪ, ಯೋಗೀಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net