ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ. ವೈ. ನಂಜೇಗೌಡ ರವರಿಗೆ ಪ್ರಶಸ್ತಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ರಾಷ್ಟಿçÃಯ ಡೈರಿ ಅಭಿವೃದ್ದಿ ಮಂಡಳಿಯು ಪುದುಚೇರಿಯಲ್ಲಿಯಲ್ಲಿ ನಡೆಸಿದ ೬೦ನೇ ವರ್ಷದ ವಜ್ರಮಹೋತ್ಸವ ಸಮಾರಂಭದಲ್ಲಿ ಕೋಲಾರ ಹಾಲು ಒಕ್ಕೂಟ ಎನ್.ಡಿ.ಡಿ.ಬಿ ಸಂಸ್ಥೆ ಒದಗಿಸುವ ಎಲ್ಲಾ ಸೌರ್ಕರ್ಯಗಳನ್ನು ಒಕ್ಕೂಟ ವ್ಯಾಪ್ತಿಯಲ್ಲಿ ಉತ್ತಮವಾಗಿ ಅನುಷ್ಠಾನಗೊಂಡಿರುವ ಮತ್ತು ಹೊಸ ಯೋಜನೆಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಕೋಲಾರ ಒಕ್ಕೂಟಕ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ.

ಗುರುವಾರ ಪುದುಚೇರಿಯಲ್ಲಿ ನಡೆದ ೬೦ನೇ ವಾರ್ಷಿಕ ವಜ್ರಮಹೋತ್ಸವ ಸಮಾರಂಭದಲ್ಲಿ ಕೋಲಾರ ಒಕ್ಕೂಟದ ಅಧ್ಯಕ್ಷ ಹಾಗೂ ಮಾಲೂರು ಶಾಸಕ ಕೆ.ವೈ. ನಂಜೇಗೌಡರಿಗೆ ಪುದುಚೇರಿಯ ಮುಖ್ಯಮಂತ್ರಿ ಎಸ್.ರಂಗಸ್ವಾಮಿ, ರಾಜ್ಯಪಾಲ ಕೆ.ಕೈಲಾಶ್‌ನಾಥನ್, ಎನ್.ಡಿ.ಡಿ.ಬಿ ಅಧ್ಯಕ್ಷ ಡಾ.ಮೀನೆಶ್ ಶಾ ರವರು ಪ್ರಶಸ್ತಿ ನೀಡಿ ಪುರಸ್ಕರಿಸಿದರು.

ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ)ಸಂಸ್ಥೆ ೧೯೬೫ ರಲ್ಲಿ ಪ್ರಾರಂಭವಾಗಿ ದೇಶದ ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಅಂಕಿತವಾಗಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ದೇಶವಾಗಿದ್ದು, ಎನ್.ಡಿ.ಡಿ.ಬಿ ಯೋಜನೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಹಾಲು ಉತ್ಪಾದನೆ ಹೆಚ್ಚಳ, ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ, ರೈತರಿಗೆ ಸ್ಥಿರ ಆದಾಯ, ಉದ್ಯೋಗ ಸೃಷ್ಠಿ, ಮಹಿಳಾ ಸಬಲೀಕರಣ, ಹೈನುಗಾರಿಕೆಯಲ್ಲಿ ತಂತ್ರಜ್ಞಾನ ಜಾರಿ, ಆರೋಗ್ಯ ಮತ್ತು ಆಹಾರ ಭದ್ರತೆ ನೀಡುವ ಮೂಲಕ ಭಾರತೀಯ ಹೈನುಗಾರಿಕೆ ಕ್ಷೇತ್ರದಲ್ಲಿ ದೀರ್ಘಕಾಲಿಕ, ಸಮಗ್ರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಬಹುಮಟ್ಟಿಗೆ ಸಹಕಾರಿಯಾಗಿದೆ.

ಸಮಾರಂಭದಲ್ಲಿ ವಿವಿಧ ರಾಜ್ಯಗಳ ಹಾಲು ಒಕ್ಕೂಟಕಗಳ ಅಧ್ಯಕ್ಷರುಗಳು, ಅಧಿಕಾರಿಗಳು ಹಾಗೂ ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ವ್ಯವಸ್ಥಾಪಕ ಎನ್.ನಾಗೇಶ್ ರವರು ಉಪಸ್ಥಿತರಿದ್ದರು.

ಚಿತ್ರ ೧೧ ಕೆ.ಎಲ್.ಆರ್. ೦೧ : ಪುದಿಚೇರಿಯ ಮುಖ್ಯಮಂತ್ರಿ ಎನ್ ರಂಗಸ್ವಾಮಿ, ರಾಜ್ಯಪಾಲರಾದ ಕೆ. ಕೈಲಾಶ್‌ನಾಥನ್ ಹಾಗೂ ಎನ್.ಡಿ.ಡಿ.ಬಿ ಅಧ್ಯಕ್ಷರಾದ ಡಾ|| ಮೀನೆಶ್ ಶಾ ರವರಿಂದ ಕೋಲಾರ ಒಕ್ಕೂಟದ ಪರವಾಗಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ ವೈ ನಂಜೇಗೌಡ ಪ್ರಶಸ್ತಿ ಪ್ರಧಾನವನ್ನು ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net