ರಾಷ್ಟಿಯ ಹೆದ್ದಾರಿಯಲ್ಲಿ ಖಾಸಗಿ ಹೋಟೆಲ್ ರವರು ಅನಕೂಲಕ್ಕಾಗಿ ಮಾಡಿರುವ ರಸ್ತೆಯನ್ನು ಮುಚ್ಚಿಸಿ/ಕೋಟಿಗಾನಹಳ್ಳಿ ಗಣೇಶ್‌ಗೌಡ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ನಗರದ ಹೊರವಲಯದ ಬೆಂಗಳೂರು ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಟಮಕ ಸಮೀಪ ಸರ್ವಿಸ್ ರಸ್ತೆಗೆ ಮುಖ್ಯ ರಸ್ತೆಯಿಂದ ನಾಗಾರ್ಜುನ ಹೋಟೆಲ್ ಮಾಲೀಕರು ದಾರಿ ಮಾಡಿರುವುದನ್ನು ಕೂಡಲೇ ಮುಚ್ಚಬೇಕು ಎಂದು ನಮ್ಮ ಕೋಲಾರ ರೈತ ಸಂಘದಿAದ ಎಡಿಸಿ ಶಂಕರ್ ವಣಿಕ್ಯಾಳ್‌ರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಮ್ಮ ಕೋಲಾರ ರೈತ ಸಂಘದ ಕೋಟಿಗಾನಹಳ್ಳಿ ಗಣೇಶ್ ಮಾತನಾಡಿ, ಹೆದ್ದಾರಿಯಲ್ಲಿ ಆರ್.ಎಲ್.ಜಾಲಪ್ಪ ಆಸ್ಪತ್ರೆ ಅವರ ಹೆಸರರನ್ನು ಹೇಳಿಕೊಂಡು, ನಾಗಾರ್ಜುನ ಹೋಟೆಲ್ ಮಾಲೀಕರು ತಮ್ಮ ವೈಯುಕ್ತಿಕ ಕಾರಣಕ್ಕಾಗಿ ಅನುಕೂಲ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ನೀಡಬಾರದೆಂದರಲ್ಲದೆ, ಅವಕಾಶ ಆಗುವುದಂತೂ ನಾಗಾರ್ಜುನ ಹೋಟೆಲ್ ಅವರಿಗೆ ಮಾತ್ರವೇ ವಿನಹ, ಆರ್.ಎಲ್.ಜಾಲಪ್ಪ ಮೆಡಿಕಲ್ ಆಸ್ಪತ್ರೆ ಅವರಿಗೆ ಯಾವುದೇ ರೀತಿಯ ಅನುಕೂಲವಾಗುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಸರ್ವಿಸ್ ರಸ್ತೆಯಲ್ಲಿ ಯಾವುದೇ ಉಪ ರಸ್ತೆಯನ್ನು ತಮ್ಮ ವೈಯುಕ್ತಿಕ ಕಾರಣಕ್ಕಾಗಿ ಮಾಡಿಕೊಳ್ಳಲು, ಸಂಬAಧಪಟ್ಟ ಅಧಿಕಾರಿಗಳ ಅನುಮತಿಯನ್ನು ಪಡೆಯದೇ ರಸ್ತೆಯನ್ನು ದುರ್ಬಳಕ್ಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜಾಲಪ್ಪ ಆಸ್ಪತ್ರೆಗೆ ಬರುವವರಿಗೆ ಸರ್ವೀಸ್ ರಸ್ತೆಯಲ್ಲಿ ನಾನಾ ರೀತಿಯ ಮಾರ್ಗಗಳು ಇದ್ದು, ಆ ಮಾರ್ಗಗಳಲ್ಲಿ ಆಂಬುಲೆನ್ಸ್ ವಾಹನಗಳು ಸಂಚಾರ ಮಾಡುತ್ತವೆ. ನಾಗಾರ್ಜುನ ಹೋಟೆಲ್ ಬಳಿ ತೆರೆದಿರುವ ರಸ್ತೆ ಯಾವುದೇ ರೀತಿಯ ಅನುಕೂಲವಾಗುವುದಿಲ್ಲ ಹೋಟಲ್ ಅನುಕೂಲಕ್ಕಾಗಿ ದಾರಿ ಮಾಡಕೊಂಡಿರುವುದನ್ನು ಕೂಡಲೇ ಮುಚ್ಚಬೇಕೆಂದು ರೈತ ಸಂಘ ಎಚ್ಚರಿಕೆ ನೀಡಿದೆ.
ಮನವಿ ನಿಯೋಗದಲ್ಲಿ ಕೆಸಿಪಿ ನಾಗರಾಜ್, ಕೆಂಬೋಡಿ ರವಿ, ದೊಡ್ನಹಳ್ಳಿ ನಾರಾಯಣಪ್ಪ, ಕೆಂಬೋಡಿ ಕೃಷ್ಣೆಗೌಡ, ಅಗ್ರಹಾರ ಸೋಮರಸನಹಳ್ಳಿ ನಾರಾಯಣಸ್ವಾಮಿ ಇದ್ದರು.

ಚಿತ್ರ ೨೭ ಕೆ.ಎಲ್.ಆರ್. ೦೩ : ರಾಷ್ಟಿçÃಯ ಹೆದ್ದಾರಿ ಟಮಕ ಬಳಿ ಖಾಸಗಿ ಹೋಟೆಲ್‌ನವರು ಮಾಡಿರುವ ರಸ್ತೆಯನ್ನು ಕೂಡಲೇ ಮುಚ್ಚಬೇಕೆಂದು ನಮ್ಮ ಕೋಲಾರ ರೈತ ಸಂಘದಿAದ ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್ ರವರಿಗೆ ಮನವಿ ಸಲ್ಲಿಸುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net