ರಾಯರ ಆರಾಧನಾ ಮಹೋತ್ಸವ ಸಂಪನ್ನ

rayaru
ಕಡೂರು ಪಟ್ಟಣದ ಕೋಟೆಯ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವದ ಅಂಗವಾಗಿ ಪ್ರಲ್ಹಾದರಾಜರ ರಥೋತ್ಸವವನ್ನು ತೇರು ಬೀದಿಯಲ್ಲಿ ನಡೆಸಲಾಯಿತು. ಲಕ್ಷ್ಮೀನಾರಾಯಣ್, ಮನುಕುಮಾರ್, ಕೃಷ್ಣಮೂರ್ತಿ ಜೋಷಿ, ಚೇತನ್‌ಕೆಂಪರಾಜ್ ಮತ್ತಿತರಿದ್ದರು.
Published on

ಕಡೂರು: ಪಟ್ಟಣದ ಕೋಟೆಯ ತೇರು ಬೀದಿಯಲ್ಲಿ ಸಂಭ್ರಮದಿಂದ ಶನಿವಾರ ಉತ್ತರಾಧನೆಯ ಅಂಗವಾಗಿ ಪ್ರಲ್ಹಾದರಾಜರ ರಥೋತ್ಸವದೊಂದಿಗೆ ರಾಯರ ಆರಾಧನಾ ಮಹೋತ್ಸವ ಸಂಪನ್ನಗೊಂಡಿತು.
ಶನಿವಾರ ಬೆಳಗ್ಗೆ ಅಷ್ಟೋತ್ತರದೊಂದಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಕೋಟೆಯ ತೇರುಬೀದಿಯಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಭಕ್ತರು ನೆರೆದಿದ್ದರು. ಅಲಂಕೃತ ರಥದಲ್ಲಿ ಪ್ರಲ್ಲಾದರಾಜರ ಉತ್ಸವಮೂರ್ತಿಯನ್ನು ಪ್ರತಿಷ್ಟಾಪಿಸಿ ಕೋಟೆಯ ತೇರುಬೀದಿಗಳಲ್ಲಿ ರಥವನ್ನು ಎಳೆಯಲಾಯಿತು. ಭಜನಾ ಮಂಡಳಿಯಿಂದ ರಾಯರ ಭಜನೆ, ಜಯಘೋಷಗಳು ಮೊಳಗಿದವು.
ಬೃಂದಾವನ ಟ್ರಸ್ಟ್‌ನ ಅಧ್ಯಕ್ಷ ಲಕ್ಮೀನಾರಾಯಣ ಮಾತನಾಡಿ, ಮಠದ ಭಕ್ತರ ಆಶಯದಂತೆ ರಾಯರ ಅನುಗ್ರಹದಿಂದ ಆರಾಧನಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು. ಮಠದ ಸಮಿತಿಯ ಕಾರ್ಯದರ್ಶಿ ಟಿ.ಆರ್.ಮನು, ಟಿ.ಆರ್.ಪವನ್, ಕೃಷ್ಣಮೂರ್ತಿ ಜೋಷಿ, ಪ್ರದೀಪ್ ಓಂಕಾರ್, ವೆಂಕಟೇಶ್ ಪದಕಿ, ಮಂಜುನಾಥ್ ಗೋಟಾ, ಅರ್ಚಕರಾದ ನಾಗರಾಜ್ ಆಚಾರ್, ಶ್ರೀನಿವಾಸ್, ಚೇತನ್ ಕೆಂಪರಾಜ್, ದತ್ತಾತ್ರಿ, ಭರತ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net