ರಾಮೇನಹಳ್ಳಿ ಕೆರೆಯಿಂದ 200ಕ್ಕೂ ಹೆಚ್ಚು ಎಕರೆಗೆ ನೀರು

12HDK 01
Published on

ಎಚ್.ಡಿ.ಕೋಟೆ: ತಾಲೂಕಿನ ರಾಮೇನಹಳ್ಳಿ ಕೆರೆಯಿಂದ ಸುತ್ತಮುತ್ತಲಿನ 250 ಕುಟುಂಬಗಳಿಗೆ ಉಪಯೋಗವಾಗಲಿದ್ದು, 200ಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರುಣಿಸುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ತಿಳಿಸಿದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಚ್.ಡಿ.ಕೋಟೆ ಮತ್ತು ರಾಮೇನಹಳ್ಳಿ ಕೆರೆ ಸಮಿತಿ ಸಂಯುಕ್ತಾಶ್ರಯದಲ್ಲಿ ರಾಮನಹಳ್ಳಿ ಕೆರೆ ಆವರಣದಲ್ಲಿ ಮಂಗಳವಾರ 471ನೇ ನಮ್ಮೂರು ನಮ್ಮ ಕೆರೆ ಅಡಿಯಲ್ಲಿ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ರಾಮೇಹಳ್ಳಿಕೆರೆ 6.20 ಎಕರೆ ಇದ್ದು ಸಂಪೂರ್ಣ ಹೂಳು ತೆಗೆಯಲಾಗಿದೆ. ಇದು ಪುರಾತನ ಕೆರೆಯಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುಮಾರು 6.47 ಲಕ್ಷ ರೂ., ಗ್ರಾಮಸ್ಥರಿಂದ 6 ಲಕ್ಷ ರೂ. ನೆರವು ಸೇರಿ ಒಟ್ಟು 12.47ಲಕ್ಷ ರೂ.ಗಳಿಂದ ಕೆರೆ ಅಭಿವೃದ್ಧಿಗೊಳಿಸಲಾಗಿದೆ ಎಂದರು.


ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ಪ್ರಯೋಜನವಾಗುವ ನಿಟ್ಟಿನಲ್ಲಿ, ಕೃಷಿ ಭೂಮಿಗೆ ಅಂತರ್ಜಲ ಮಟ್ಟ ಹೆಚ್ಚಲು ಸಹಕಾರಿಯಾಗಲಿದೆ ಎಂದರು.


ಯೋಜನಾಧಿಕಾರಿ ವಿ.ಭಾಸ್ಕರ್, ಕೃಷಿ ಅಧಿಕಾರಿ ಬಿ.ಜೆ.ರಾಜು, ಇಂಜಿನಿಯರ್ ಸುರೇಶ್, ಒಕ್ಕೂಟದ ಅಧ್ಯಕ್ಷ ಉಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಜವರನಾಯಕ, ಮುಖಂಡರಾದ ಬಸವನಾಯಕ, ಚಿಕ್ಕನಾಯಕ, ಪುಟ್ಟರನಾಯಕ, ಭೋಜನಾಯಕ, ಪ್ರಕಾಶ್, ಶಿವಯ್ಯ, ಮಹಾದೇವಯ್ಯ, ಪುಟ್ಟಸೋಮಾಚಾರಿ, ರಾಮೇನಹಳ್ಳಿ ಕೆರೆ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net