ರಾಜ್ಯದ ಎಲ್ಲಾ ಜಿಲ್ಲೆಗಳ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ದಿ ನಿಧಿಗೆ ತಲಾ ೧೦ ಲಕ್ಷರೂ ನೀಡಲು ಚಿಂತನೆ / ಕೆ.ವಿ.ಪ್ರಭಾಕರ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ರಾಜ್ಯ ಸರ್ಕಾರದ ಮುಂದಿನ ಬಜೆಟ್‌ನಲ್ಲಿ ಎಲ್ಲಾ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಘಗಳ ಕ್ಷೇಮಾಭಿವೃದ್ದಿ ನಿಧಿಗೆ ತಲಾ ೧೦ ಲಕ್ಷರೂ ನೀಡಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ತುಮಕೂರಿನಲ್ಲಿ ನಡೆದ ಪತ್ರಕರ್ತರ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿ ಜಿಲ್ಲೆಯ ಘನತೆ ಹೆಚ್ಚಿಸಿದ ಪತ್ರಕರ್ತರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಬ್ಬಡ್ಡಿಯಲ್ಲಿ ಚಾಂಫಿಯನ್ ಆಗಿ ಹೊರಹೊಮ್ಮಿದ ಜಿಲ್ಲಾ ತಂಡಕ್ಕೆ ವೈಯಕ್ತಿಕವಾಗಿ ೨೫ ಸಾವಿರ ರೂ ಬಹುಮಾನ ಘೋಷಿಸಿ ಮಾತನಾಡಿದರು.

ರಾಜ್ಯದಲ್ಲೇ ಕೋಲಾರ ಜಿಲ್ಲಾ ಸಂಘವು ಮಾದರಿಯಾಗಿದೆ, ಪ್ರತಿಯೊಂದು ಚಟುವಟಿಕೆಗಳನ್ನು ಸಂಘವು ಯಶಸ್ವಿಯಾಗಿ ಮಾಡಿಕೊಂಡು ಬಂದಿದೆ. ಯಾವುದೇ ಕ್ರೀಡಾ ಕೂಟದಲ್ಲಿ ಭಾಗವಹಿಸಿದಾಗ ಇಡೀ ಜಿಲ್ಲೆಯ ಪತ್ರಕರ್ತರ ತಂಡವೇ ಭಾಗವಹಿಸಿದೆ ಎನ್ನುವ ದೃಢವಿಶ್ವಾಸದೊಂದಿಗೆ ಗೆಲುವು ಸಾಧಿಸಿಕೊಂಡು ಬಂದಿದ್ದೀರಿ ಎಂದು ಅಭಿನಂದಿಸಿದರು.

ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಎಲ್ಲೇ ನಡೆಯಲಿ ಕಪ್ ಮಾತ್ರ ಕೋಲಾರದ ಪತ್ರಕರ್ತರ ಸಂಘಕ್ಕೆ ಬರಬೇಕು ಎಂಬ ಬ್ರಾö್ಯಂಡ್ ಹೆಚ್ಚಬೇಕು, ಕೋಲಾರದವರು ಭಾಗವಹಿಸಿದ್ದಾರೆ ಎಂದರೆ ಅಲ್ಲಿ ಗೆಲುವು ನಮ್ಮದಾಗಿರಬೇಕು ಎಂಬ ಸ್ಪೂರ್ತಿ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.

ಇಂದಿನ ಕಾಲಘಟ್ಟದಲ್ಲಿ ವರದಿಗಾರಿಕೆ ವಿಧಾನ ಬದಲಾಗಿದೆ. ತಾಂತ್ರಿಕತೆ, ನೈಪುಣ್ಯತೆ ಇಂದಿನ ಅಗತ್ಯವಾಗಿದೆ, ನೀವು ಸಾಧನೆ ಮಾಡಿದಾಗ ತಾನಾಗಿಯೇ ಗೌರವ, ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದು ತಿಳಿಸಿದರು.

ರಾಜ್ಯಮಟ್ಟದ ಪತ್ರಿಕಾರಂಗದಲ್ಲಿ ಸದಾ ಕೋಲಾರದ ಧ್ವನಿ ಹೆಚ್ಚಿನದಾಗಿ ಕೇಳಿ ಬರುತ್ತಲೇ ಇದೆ. ಇದು ಕ್ರೀಡಾಕೂಟಗಳಲ್ಲೂ ಆಗಿದೆ, ಈ ಬೆಳೆವಣಿಗೆ ಆಶಾದಾಯಕವಾಗಿದ್ದು, ನಿಮ್ಮ ಸಾಧನೆ ಮುಂದುವರೆಸಿ ಎಂದು ಶುಭ ಹಾರೈಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಕೋಲಾರ ಪತ್ರಕರ್ತರ ಸಂಘಕ್ಕೆ ತನ್ನದೇ ಆದ ಬ್ರಾö್ಯಂಡ್ ಇದೆ. ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ಇರುತ್ತದೆ, ಸೋತಾಗಲೂ ಬೆನ್ನು ತಟ್ಟುವ ಮೂಲಕ ಸಂಘವು ಹುರಿದುಂಬಿಸುತ್ತದೆ ಎಂದು ಹೇಳಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಕೋಲಾರಕ್ಕೆ ಕ್ರೀಡೆಗಳಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ, ಅದು ಹಿಂದಿನಿAದಲೂ ಬಂದಿದೆ, ಉತ್ತಮ ಕ್ರೀಡಾಪಟುಗಳು ನಮ್ಮಲ್ಲಿದ್ದಾರೆ, ಆತ್ಮಸ್ಥೈರ್ಯದಿಂದ ಗೆದ್ದು ಬರಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‌ಕುಮಾರ್, ರಾಜೇಂದ್ರಸಿAಹ, ಮಾಮಿ ಪ್ರಕಾಶ್, ಎಸ್.ರವಿಕುಮಾರ್, ಮದನ್ ಕುಮಾರ್, ಕಿರಣ್ ಕುಮಾರ್, ನಾಗರಾಜ್, ಮಂಜುನಾಥ್, ಸಿ.ಅಮರೇಶ್, ಗಂಗರಾಜು, ಗಂಗಾಧರ್ ಪುರುಷೋತ್ತಮ ಶ್ರೀಕಾಂತ್, ವಿನೋದ್, ಸತೀಶ್, ವಿಜಯಕುಮಾರ್, ಸಮೀರ್, ಗೋಪಿ, ಶ್ರೀನಿವಾಸ್ ಮತ್ತಿತರರಿದ್ದರು.

ಚಿತ್ರ ೨೫ ಕೆ.ಎಲ್.ಆರ್. ೦೬ : ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ತುಮಕೂರಿನಲ್ಲಿ ನಡೆದ ಪತ್ರಕರ್ತರ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿ ಜಿಲ್ಲೆಯ ಘನತೆ ಹೆಚ್ಚಿಸಿದ ಪತ್ರಕರ್ತರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net