ವಿಜಯವಾಣಿ ಸುದ್ದಿಜಾಲ ಕೋಲಾರ
ಟೆಮೋಟೋ ಗೆ ಬೆಲೆ ಇಲ್ಲದೆ ರಸ್ತೆಗಳಿಗೆ ಸುರಿಯುವಂತೆ ಆಗಿದೆ. ಜೂನ್ ತಿಂಗಳ ನಂತರ ಬೆಲೆ ಏರಿಕೆಯಾಗುತ್ತದೆಂಬ ಜನರ ನಿರೀಕ್ಷೆ ಹುಸಿಯಾಗಿದೆ. ಜೂನ್ ತಿಂಗಳು ಪ್ರಾರಂಭಗೊAಡು ಒಂದು ವಾರ ಕಳೆದರೂ ಬೆಲೆ ಏರಿಕೆ ಕಾಣದೆ ಇರುವುದರಿಂದ ರೈತರು ಕಂಗಾಲಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಹಾಗೂ ಬಿಕರಿಯಾಗದೆ ಉಳಿದ ಹಣ್ಣನ್ನು ತಂದು ರೈತರು ರಸ್ತೆಗಳಿಗೆ ಸುರಿದುಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಬೆಂಬಲ ಬೆಲೆ ನೀಡಬೇಕೆಂದು ರೈತರು ಒತ್ತಾಯಪಡಿಸಿದ್ದರು. ಜಿಲ್ಲಾಧಿಕಾರಿ ಎಂ.ಆರ್.ರವಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದ್ದರು. ಬೆಂಬಲ ಬೆಲೆ ಘೋಷಣೆ ಮುನ್ನವೇ ರೈತರು ಟೊಮೆಟೋವನ್ನು ರಸ್ತೆಗಳಿಗೆ ಸುರಿಯುವಂತೆ ಆಗಿದೆ.
ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಟೊಮೆಟೋಗೆ ಉತ್ತಮ ಬೆಲೆ ಬರುತ್ತದೆಂದು ಸಾವಿರಾರು ಹೆಕ್ಟೇರ್ ಪ್ರರ್ದೇಶದಲ್ಲಿ ರೈತರು ಟೊಮೆಟೋ ಫಸಲನ್ನು ಬೆಳೆದಿದ್ದಾರೆ. ಜೂನ್ ಪ್ರಾರಂಭಗೊAಡರೂ ಬೆಲೆ ಏರಿಕೆಯಾಗದಂತೆ ಆಗಿದ್ದು, ಮಾರುಕಟ್ಟೆಗೆ ಹೊರ ರಾಜ್ಯಗಳಿಂದ ವ್ಯಾಪಾರಸ್ಥರು ಬಾರದೆ ಇರುವುದರಿಂದ ಮಾರುಕಟ್ಟೆಯಲ್ಲಿ ದಿನೇ ದಿನೇ ಅವಕ ಹೆಚ್ಚಾಗುತ್ತಿರುವುದರಿಂದ ಅದಕ್ಕೆ ತಕ್ಕಾಗಿ ಖರೀದಿದಾರರು ಇಲ್ಲದೆ ಇರುವುದರಿಂದ ಬೆಲೆ ಕುಸಿಯಲು ಒಂದು ಕಾರಣವಾದರೆ, ಹಣ್ಣಿನ ಗುಣಮಟ್ಟ ಇಲ್ಲವೆಂಬ ಕಾರಣದಿಂದ ವ್ಯಾಪಾರಸ್ಥರು ಖರೀದಿಗೆ ಮುಂದಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಗುಣಮಟ್ಟ ಇರುವ ಹಣ್ಣು ೧೫ ಕೆ.ಜಿ.ಬಾಕ್ಸ್ ೨೦೦ ರಿಂದ ೨೫೦ ರೂ.ಗಳ ತನಕ ಮಾರಾಟವಾಗುತ್ತಿದೆ. ಗುಣಮಟ್ಟ ಇಲ್ಲದ ಹಣ್ಣು ೬೦ ರೂಗಳಿಂದ ೧೦೦ ರೂ.ಗಳ ತನಕ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ತಂದ ಹಣ್ಣು ಕಡಿಮೆ ಬೆಲೆಗೆ ಹರಾಜು ಆದ ಕಾರಣ ರೈತರು ಮಾರನೇ ದಿನವಾದರೂ ಉತ್ತಮ ಬೆಲೆ ಬರುತ್ತೆಂದು ಮಾರುಕಟ್ಟೆಯಲ್ಲಿ ಒಂದೆರಡು ದಿನ ಸರಕನ್ನು ಇಟ್ಟುಕೊಂಡವರು ಬೆಲೆ ಏರಿಕೆಯಾಗದ ಕಾರಣ ಕೊನೆಗೆ ರಸ್ತೆಗೆ ಸುರಿಯುವಂತೆ ರೈತರ ಬದುಕಾಗಿದೆ.
ಬಕ್ರೀದ್ ಹಬ್ಬದ ಪ್ರಯುಕ್ತ ವ್ಯಾಪಾರಸ್ಥರು ಮಾರುಕಟ್ಟೆಗೆ ಬಾರದೆ ಊರುಗಳಿಗೆ ತೆರಳಿದ್ದಾರೆ ಎಂಬ ನೆಪದಲ್ಲಿ ಶನಿವಾರ ಮಾರುಕಟ್ಟೆಯಲ್ಲಿ ಟೊಮೆಟೋ ಖರೀದಿಸಿ ರಫ್ತು ಮಾಡುವ ವ್ಯಾಪಾರಸ್ಥರೇ ಇಲ್ಲ ಎಂಬ ಕಾರಣದಿಂದ ಶನಿವಾರ ಮಾರುಕಟ್ಟೆಯಲ್ಲಿ ಬೆಲೆ ಕುಸಿಯಲು ಕಾರಣವಾಗಿದೆ. ಇನ್ನು ಎರಡು ಮತ್ತು ಮೂರು ದಿನಗಳು ಬೆಲೆ ಏರಿಕೆಯಾಗುವುದಿಲ್ಲ. ವ್ಯಾಪಾರಸ್ಥರು ಮರಳಿ ಹೊರ ರಾಜ್ಯಗಳಿಂದ ಬರುವ ತನಕ ಬೆಲೆ ಏರಿಕೆ ಆಗುವುದಿಲ್ಲ ಎಂಬ ಮಾತು ವ್ಯಾಪಾರಸ್ಥರಿಂದ ಕೇಳಿಬಂದಿರುವುದರಿAದ ಮಾರುಕಟ್ಟೆಗೆ ತಂದಿದ್ದ ಕಳಪೆ ಗುಣಮಟ್ಟದ ಹಣ್ಣಿನ ಜೊತೆಗೆ ಉತ್ತಮ ಗುಣಮಟ್ಟದ ಹಣ್ಣನ್ನು ರಸ್ತೆಗಳಿಗೆ ಶನಿವಾರ ಸುರಿದಿದ್ದಾರೆ.
ಕೋಟ್
ರೈತರ ನಿರೀಕ್ಷೆ ಹುಸಿಯಾಗುವಂತೆ ಆಗಿದೆ. ಜೂನ್ ತಿಂಗಳಿನಲ್ಲಿ ಬೆಲೆ ಬರುತ್ತದೆ ಎಂದು ರೈತರು ಅತಿ ನಿರೀಕ್ಷೆ ಇಟ್ಟುಕೊಂಡು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋ ಬೆಳೆದಿದ್ದಾರೆ. ಲಕ್ಷಾಂತರ ರೂ.ಗಳ ಸಾಲಸೋಲ ಮಾಡಿ ಬಂಡವಾಳ ಹಾಕಿದ್ದಾರೆ. ತೋಟದಲ್ಲಿ ಹಣ್ಣು ಕಿತ್ತು ಸಾಗಿಸುವ ಕೂಲಿ ಬಾರದಂತೆ ಆಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದ ಹಣ್ಣು ಮಾರಾಟವಾಗದ ಕಾರಣ ರಸ್ತೆಗಳಿಗೆ ಸುರಿಯುವಂತಹ ಪರಿಸ್ಥಿತಿ ಉಂಟಾಗಿದೆ. ಸರ್ಕಾರ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ. ಟೊಮೆಟೋ ಗತಿ ಹೀಗಾದರೆ ಮಾವಿನ ಬೆಳೆಗಾರರ ಗತಿ ಮುಂದೆ ಏನಾಗಬಹುದು ಎಂಬ ಭಯ ಕಾಡುತ್ತಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೈತರ ಸಮಸ್ಯೆಗಳಿಗೆ ಸ್ಪಂಧಿಸಲಿ
-ಪಿಆರ್. ಸೂರ್ಯನಾರಾಯಣ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಚಿತ್ರ ೦೭ ಕೆ.ಎಲ್.ಆರ್. ೦೨ : ಕೋಲಾರ ಶ್ರೀನಿವಾಸಪುರ ರಸ್ತೆಯ ಮುದುವಾಡಿ ಕಟ್ಟೆಯ ಮೇಲೆ ರಸ್ತೆ ಸುರಿದಿರುವ ಟೊಮೆಟೋ
ಚಿತ್ರ ೦೭ ಕೆ.ಎಲ್.ಆರ್. ೦೨ಎ : ಪಿಆರ್. ಸೂರ್ಯನಾರಾಯಣ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವರ ಭಾವಚಿತ್ರ