ರಸ್ತೆ ಸಮಸ್ಯೆ ಬಗೆಹರಿಸಿದ ಗ್ರಾಪಂ

26kls1 road
ಕಳಸದ ಮುಖ್ಯ ರಸ್ತೆಯಲ್ಲಿ ನೀರು ಹರಿದು ಆಗುತ್ತಿದ್ದ ಸಮಸ್ಯೆಯನ್ನು ಗ್ರಾಪಂ ಸರಿಪಡಿಸುತ್ತಿರುವುದು.
Published on

ಕಳಸ: ಮುಖ್ಯ ರಸ್ತೆಯಲ್ಲಿ ನೀರು ಹರಿದು ಆಗುತ್ತಿದ್ದ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ನಿವಾರಿಸಿದೆ.

ಜೋರಾಗಿ ಮಳೆ ಬಂದ ಕೂಡಲೇ ಚರಂಡಿಯಲ್ಲಿ ಹರಿಯಬೇಕಾಗಿದ್ದ ನೀರು ಸಂಪೂರ್ಣ ರಸ್ತೆಯಲ್ಲಿ ಹರಿದು ರಸ್ತೆ ನದಿ ಸ್ವರೂಪವನ್ನು ಪಡೆಯುತ್ತಿತ್ತು. ಇದರಿಂದ ರಸ್ತೆ ಹಾಳಾಗುವುದಲ್ಲದೆ, ಸಾರ್ವಜನಿಕರು, ವಾಹನ ಸವಾರರಿಗೂ ತೀರ ತೊಂದರೆ ಆಗುತ್ತಿತ್ತು. ಭಾನುವಾರ ಸಾಕಷ್ಟು ಮಳೆಯಾದ ಕಾರಣ ರಸ್ತೆ ನದಿಯಂತಾಗಿತ್ತು. ಕಳಸದ ಕೈಮರದಲ್ಲಿ ಮೋರಿಯೊಂದು ಬ್ಲಾಕ್ ಆಗಿ ಮೇಲ್ಬಾಗದಿಂದ ಹರಿದು ಬರುವ ನೀರು ರಸ್ತೆಯಲ್ಲಿ ನಿಲ್ಲುತ್ತಿತ್ತು. ಈ ಬಗ್ಗೆ ಗ್ರಾಪಂ ಎಚ್ಚೆತ್ತು ಸಮಸ್ಯೆ ನಿವಾರಣೆ ಮಾಡಿ ಕಳಸ ಪೇಟೆಯ ಮುಖ್ಯರಸ್ತೆಗೆ ನೀರು ಬರದಂತೆ ಕ್ರಮ ತೆಗೆದುಕೊಂಡಿದೆ. ಪಂಚಾಯಿತಿ ಸದಸ್ಯರಾದ ಸಂತೋಷ್ ಹಿನಾರಿ, ವೀರೇಂದ್ರ ಜೈನ್, ಪಿಡಿಒ ಕವೀಶ್, ಆದರ್ಶ, ಹನುಮ, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net