ರಸ್ತೆ ಅಗೆದು ಪೈಪ್ ಅಳವಡಿಕೆಗೆ ವಿರೋಧ

15kpp1 road
ಕೊಪ್ಪ ಗ್ರಾಮಾಂತರ ಗ್ರಾಪಂ ವ್ಯಾಪ್ತಿಯ ಉದಯ ನಗರದಲ್ಲಿ ರಸ್ತೆ ಅಗೆದು ಪೈಪ್‌ಲೈನ್ ಅಳವಡಿಸಿರುವುದು.
Published on

ಕೊಪ್ಪ: ಇಲ್ಲಿನ ಕೊಪ್ಪ ಗ್ರಾಮಾಂತರ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕಾಗಿ ರಸ್ತೆ ಮಧ್ಯ ಪೈಪ್ ಅಳವಡಿಸಿರುವುದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮೇಲಿನಪೇಟೆಯ ಉದಯ ನಗರ, ನೇತಾಜಿ ನಗರ ಹಾಗೂ ಸುತ್ತಮುತ್ತಲ ಭಾಗದ ರಸ್ತೆಯನ್ನು ಅಗೆದು ಪೈಪ್ ಅಳವಡಿಸುತ್ತಿದ್ದಾರೆ. ಹಾಲಿ ಪೈಪ್ ಹಾದು ಹೋಗಿರುವ ಜಾಗವನ್ನು ಬಿಟ್ಟು, ಹೊಸದಾಗಿ ಗುಂಡಿ ತೋಡಿ ಪೈಪ್ ಹಾಕುತ್ತಿದ್ದಾರೆ. ಪೈಪ್ ಹಾಕಿರುವ ಸ್ಥಳಕ್ಕೆ ಮತ್ತೆ ಡಾಂಬಾರು, ಕಾಂಕ್ರಿಟ್ ಹಾಕದೆ ಗುಂಡಿಗೆ ಮಣ್ಣು ಮುಚ್ಚಿ ಹೋಗುತ್ತಿದ್ದಾರೆ. ಇದರಿಂದ ರಸ್ತೆ ಹಾಳು ಜತೆಗೆ ಧೂಳು ಕೂಡ ಹೆಚ್ಚಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಕೊಪ್ಪ ಗ್ರಾಮಾಂತರ ಗ್ರಾಪಂ ರಸ್ತೆ ಅಗೆದು ಪೈಪ್ ಅಳವಡಿಸುತ್ತಿರುವುದು ಸರಿಯಲ್ಲ, ಮುಂದೆ ಪೈಪ್ ಡ್ಯಾಮೆಜ್ ಆದಲ್ಲಿ ರಸ್ತೆಯನ್ನು ಮತ್ತೆ ಅಗೆಯಬೇಕಾಗುತ್ತದೆ. ತಕ್ಷಣ ಗ್ರಾಪಂ ಆಗಿರುವ ಲೋಪ ಸರಿಪಡಿಸಿ, ರಸ್ತೆ ಪಕ್ಕದಲ್ಲಿ ಪೈಪ್ ಅಳವಡಿಸಬೇಕು ಎಂದು ಸ್ಥಳೀಯ ನಿವಾಸಿ ಬರ್ಕತ್ ಆಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net