ರಕ್ಷಣಾ ವೇದಿಕೆಯಿಂದ ಆಂಗ್ಲ ಮಾಧ್ಯಮ ನಾಮಫಲಕವನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಪಕ್ಕದಲ್ಲಿ ಖಾಸಗಿ ಕಂಪನಿಯವರು ಅಂಗ್ಲ ಭಾಷೆಯ ಜಾಹೀರಾತು ಫಲಕವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರ ತೆರವುಗೊಳಿಸಿದರು.

ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಅಂಗ್ಲ ಮಾಧ್ಯಮ ನಾಮ ಫಲಗಳ ತೆರವು ಕಾರ್ಯಕ್ಕೆ ಕೋಲಾರದಿಂದ ತೆರಳುವ ಮಾರ್ಗದಲ್ಲಿ ಜಾಹೀರಾತು ಫಲಕವನ್ನು ಕಂಡ ಕಾರ್ಯಕರ್ತರು ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಮಾತನಾಡಿ, ಅನ್ಯ ಭಾಷೆಯ ನಾಮಫಲಗಳನ್ನು ತೆರವುಗೊಳಿಸಬೇಕು ಎಂದು ಮೊದಲಿಂದಲೂ ಎಚ್ಚರಿಕೆ ನೀಡಲಾಗಿದೆ. ಇದಕ್ಕೆ ಸರ್ಕಾರವು ಸಹ ಆದೇಶ ಹೊರಡಿಸಿದೆ. ಆದರೂ ಸಹ ಕೆಲ ಖಾಸಗಿ ಕಂಪನಿಗಳವರು ನಿಯಮಗಳನ್ನು ಪಾಲಿಸದೆ ಆಂಗ್ಲ ಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲೂ ಸಹ ಅಂಗ್ಲ ಮಾಧ್ಯಮದ ನಾಮಫಲಗಳನ್ನು ತೆರವುಗೊಳಿಸಲಾಗುವುದು. ಈಗಾಗಲೇ ಹಾಕಿರುವವರು ಸ್ವಯಂ ಪ್ರೇರಿತರಾಗಿ ತೆರವುಳಿಸಬೇಕು, ಇಲ್ಲದಿದ್ದರೆ ವೇದಿಕೆಯಿಂದ ತೆರವುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವೇದಿಕೆಯ ಕಾರ್ಯಕರ್ತರಾದ ಸುರೇಶ್, ಪ್ರಭಾಕರ್, ಶಿವಶಂಕರ್, ಪ್ರಕಾಶ್ ರೆಡ್ಡಿ ಮತಿತರರು ಇದ್ದರು.

ಚಿತ್ರ ೨೭ ಕೆ.ಎಲ್.ಆರ್. ೦೫ : ಬೆಂಗಳೂರು ಚೆನೈ ರಾಷ್ಟಿçÃಯ ಹೆದ್ದಾರಿಯ ಪಕ್ಕದ ಕೋಲಾರ ಸಮೀಪದ ಸರ್ವೀಸ್ ರಸ್ತೆಯಲ್ಲಿದ್ದ ಆಂಗ್ಲ ಮಾಧ್ಯಮ ನಾಮಫಲಕಗಳನ್ನು ಕರ್ನಾಟಕ ರಕ್ಷಣಾ ವೇದಿಕೆಯವರು ತೆರವುಗೊಳಿಸುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net