ಯೋಧ ರಾಜಪ್ಪಗೆ ಅದ್ದೂರಿ ಸ್ವಾಗತ

11kls1 soldier
ಕಳಸ ಗ್ರಾಪಂಯಿಂದ ಯೋಧ ರಾಜಪ್ಪ ಹಾಗೂ ಶಿವಮೊಗ್ಗದ ಆನಂದ್ ಅವರನ್ನು ಗೌರವಿಸಲಾಯಿತು. ಕಾವ್ಯಾ, ಕವೀಶ್, ಸುನೀತಾ ಕುಮಾರಿ, ಭಾಸ್ಕರ್ ಇತರರಿದ್ದರು.
Published on

ಕಳಸ: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಗಾಯಗೊಂಡು ತವರಿಗೆ ಮರಳಿದ ಬಿಎಸ್‌ಎ್ ಎಎಸ್‌ಐ ಯೋಧ ಬಿ.ಟಿ.ರಾಜಪ್ಪ ಅವರಿಗೆ ತಾಲೂಕಿನಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಏ.22ರಂದು ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಪ್ರಾರಂಭಿಸಿತು. ಈ ದಾಳಿಯಲ್ಲಿ ಕಳಸ ಗ್ರಾಪಂ ವ್ಯಾಪ್ತಿಯ ಹಳುವಳ್ಳಿ ದಂದಾಡಿ ನಿವಾಸಿ ಬಿಸ್‌ಎ್ ಎಎಸ್‌ಐ ಯೋಧ ರಾಜಪ್ಪ ಅವರು ಉಗ್ರರೊಂದಿಗೆ ಮುಖಾಮುಖಿ ಹೋರಾಟದಲ್ಲಿ ಕಾಲಿಗೆ ಗಾಯವಾಗಿತ್ತು. ಅವರು ವೈದ್ಯಕೀಯ ರಜೆ ಮೇಲೆ ತವರಿಗೆ ಆಗಮಿಸಿದಾಗ ಬುಧವಾರ ಅವರನ್ನು ಹಾಗೂ ಅವರ ಸಹಪಾಠಿ ಶಿವಮೊಗ್ಗದ ಆನಂದ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದಿಸಲಾಯಿತು.

ಕಳಸದ ಕೆಪಿಎಸ್ ಪ್ರೌಢಶಾಲೆಯ ಆವರಣದಲ್ಲಿ ಕಳಸ ತಾಲೂಕು ಆಡಳಿತ, ತಾಪಂ, ಗ್ರಾಪಂ ಸೇರಿದಂತೆ ತಾಲೂಕಿನ ಎಲ್ಲ ಪಂಚಾಯಿತಿ, ಶಾಲಾ ಕಾಲೇಜು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಸೇರಿ ರಾಜಪ್ಪ ಅವರನ್ನು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net