

ಆನಂದಪುರ: ದಾನ ಮಾಡುವ ಒಂದು ಯೂನಿಟ್ ರಕ್ತ ತುರ್ತು ಅಗತ್ಯವಿರುವ ಎರಡು ಜೀವಗಳನ್ನು ರಕ್ಷಿಸಬಲ್ಲದು ಎಂದು ಶಿವಮೊಗ್ಗ ಮೆಗ್ಗಾನ್ ರಕ್ತನಿಧಿ ಕೇಂದ್ರದ ಆಪ್ತ ಸಮಾಲೋಚಕ ಹನುಮಂತಪ್ಪ ತಿಳಿಸಿದರು.
ಅವರು ಶುಕ್ರವಾರ ಸಮೀಪದ ಚೋರಡಿ ಗ್ರಾಪಂ ವ್ಯಾಪ್ತಿಯ ಕೊರಗಿ ಗ್ರಾಮದಲ್ಲಿ ಶಿವಮೊಗ್ಗದ ಪಶು ವೈದ್ಯಕೀಯ ಮಹಾ ವಿದ್ಯಾಲಯ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮೆಗ್ಗಾನ್ ಆಸ್ಪತ್ರೆಯೊಂದರಲ್ಲೇ 200ಕ್ಕೂ ಅಧಿಕ ಹಿಮೋಫಿಲಿಯಾ ಥ್ಯಾಲಸ್ಸೀಮಿಯಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿನಿತ್ಯ 50 ರಿಂದ 60 ಯೂನಿಟ್ ರಕ್ತದ ಅಗತ್ಯತೆ ಇದೆೆ. ರಕ್ತಕ್ಕೆ ಬೇಡಿಕೆಯಿರುವುದರಿಂದ ಆರೋಗ್ಯವಂತ ಯುವಕರು ರಕ್ತದಾನ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿ 24 ಯೂನಿಟ್ ರಕ್ತದಾನ ಮಾಡಿದರು. ಭಾರತೀಯ ದಂತ ವೈದ್ಯಕೀಯ ಸಂಸ್ಥೆಯಿಂದ ಡಾ. ವಿಕ್ರಮ್ ಕೆದ್ಲಾಯ ಮತ್ತು ಡಾ. ಶಾಂತಕುಮಾರ್ ನೇತೃತ್ವದಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು. ಡಾ.ಉಮೇಶ, ಡಾ.ವೆಂಕಟೇಶ್, ಡಾ.ಮಂಜು, ಡಾ.ಗಿರಿಧರ್ ಇತರರಿದ್ದರು.