ಯುವಕರು ದೇಶದ ಉನ್ನತಿಗೆ ಶ್ರಮಿಸಲಿ

16sri-1 police
Published on

ಶೃಂಗೇರಿ: ಮಕ್ಕಳಿಗಾಗಿ ತ್ಯಾಗ ಮನೋಭಾವದಿಂದ ಸರ್ವಸ್ವವನ್ನೂ ಧಾರೆ ಎರೆಯುವವರು ಪಾಲಕರು ಮಾತ್ರ. ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಮಕ್ಕಳು ಪಾಲಕರಿಗೆ ಗೌರವ ನೀಡುವ ಜತೆಗೆ ಅವರ ಭಾವನೆಗಳನ್ನು ಅರ್ರ್ಥೈಸಿಕೊಳ್ಳಬೇಕು ಎಂದು ಪಿಎಸ್‌ಐ ನಾಗರಾಜ್ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಗುರುವಾರ ಪಟ್ಟಣದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನಾವಿಂದು ಭ್ರಮೆಯ ಜಗತ್ತಿನಲ್ಲಿದ್ದೇವೆ. ಸಂಬಂಧಗಳಿಗೆ ಹೆಚ್ಚಿನ ಮೌಲ್ಯಗಳನ್ನು ನೀಡಿದರೆ ಮಾತ್ರ ಸಮಾಜದಲ್ಲಿ ಸಂಸ್ಕೃತಿಯ ಬದ್ಧತೆ ಹೆಚ್ಚುತ್ತದೆ. ಯುವಪೀಳಿಗೆ ಉತ್ತಮ ಶಿಕ್ಷಣ ಪಡೆದು ಸಮಾಜ ಹಾಗೂ ದೇಶದ ಉನ್ನತೀಕರಣಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಸಹಾಯಕ ಪೊಲೀಸ್ ಉಪನಿರೀಕ್ಷಕ ಸಿ.ಆರ್.ಮೋಹನ್‌ಕುಮಾರ್ ಮಾತನಾಡಿ, ಕಾನೂನನ್ನು ನಾವು ಗೌರವಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಕ್ಷಣ ಪಡೆದರೆ ಮಾತ್ರ ಉಜ್ವಲ ಭವಿಷ್ಯ ರೂಪುಗೊಳ್ಳಲು ಸಾಧ್ಯ. ದುಶ್ಚಟಗಳನ್ನು ದೂರವಿರಿಸಿ ನಾಗರಿಕರಾಗಿ ಬದುಕಬೇಕು. ಮೊಬೈಲ್, ಸಾಮಾಜಿಕ ಜಾಲತಾಣದಿಂದ ಸಾಕಷ್ಟು ದೂರವಿರಬೇಕು ಎಂದರು. ದಾನ್ವಿಕಾ, ಮಾನ್ಯಾ, ಆಶ್ರಿತಾ, ಸುಮಿತ್ರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net