ಯುವಕನ ಮೊಬೈಲ್‌ಗಳವು

Crime Logo
Published on

ಬೈಕಿನಲ್ಲಿ ಬಂದ ಖದೀಮರು, ಯುವಕನ ಮೊಬೈಲ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ದಟ್ಟಗಳ್ಳಿ ನಿವಾಸಿ ಪ್ರಶಾಂತ್ ಮೊಬೈಲ್ ಕಳೆದುಕೊಂಡವರು.

ಪ್ರಶಾಂತ್ ಏ.6ರ ಸಂಜೆ 5 ಗಂಟೆ ವೇಳೆಯಲ್ಲಿ ತಮ್ಮ ಮನೆಯ ಮುಂಭಾಗ ಮೊಬೈಲ್‌ನಲ್ಲಿ ಮಾತನಾಡಿಕೊಂಡು ತಮ್ಮ ಸಾಕು ನಾಯಿಯೊಂದಿಗೆ ವಾಯುವಿಹಾರ ನಡೆಸುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದವರು ಮೊಬೈಲ್ ಕಿತ್ತು ಕೊಂಡು ಪರಾರಿಯಾಗಿದ್ದಾರೆ.

ಯುವಕನ ನೀಡಿದ ದೂರಿನ ಮೇರೆಗೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net