ಯುವ ಪೀಳಿಗೆಗೆ ಧಾರ್ಮಿಕ ಜಾಗೃತಿ ಮೂಡಿಸಿ

26 kdr 1 bagiratha
ಕಡೂರು ತಾಲೂಕು ಕಲ್ಲಾಪುರ ಗ್ರಾಮದಲ್ಲಿ ಶ್ರೀ ಭಗೀರಥ ಮಹರ್ಷಿ ಪ್ರತಿಮೆಯನ್ನು ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅನಾವರಣಗೊಳಿಸಿದರು. ದೊರೆಸ್ವಾಮಿ, ದೇವರಾಜ್, ಪುಟ್ಟಸ್ವಾಮಿ, ಕುಮಾರ್ ಮತ್ತಿತರರಿದ್ದರು.
Published on

ಕಡೂರು: ದೇವರ ನಂಬಿಕೆ ಮೇಲೆ ಬದುಕು ಸಾಗಿಸುವ ಹಿಂದು ಧರ್ಮವು ಗ್ರಾಮೀಣ ಭಾಗದಲ್ಲಿ ಆಧ್ಯಾತ್ಮಿಕತೆಗೆ ಹೆಚ್ಚು ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ಉಪ್ಪಾರ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ಭಾನುವಾರ ಶ್ರೀ ಅಂತರಘಟ್ಟಮ್ಮ, ಶ್ರೀ ಚೌಡೇಶ್ವರಿ ನೂತನ ದೇವಾಲಯದ ಪ್ರಾರಂಭೋತ್ಸವ ಹಾಗೂ ಶ್ರೀ ಭಗೀರಥ ಮಹರ್ಷಿ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಗ್ರಾಮದಲ್ಲಿ ಎಲ್ಲರ ಸಹಕಾರದಿಂದ ಸುಂದರ ದೇವಾಲಯಗಳು ನಿರ್ಮಾಣಗೊಂಡಿರುವುದು ಸಹಬಾಳ್ವೆಗೆ ಸಾಕ್ಷಿಯಾಗಿದೆ. ಭಕ್ತರಿಗೆ ನಂಬಿಕೆಯೇ ಮೂಲ ತತ್ವವಾಗಿದೆ. ಧಾರ್ಮಿಕ ವಿಚಾರಗಳ ಬಗ್ಗೆ ಯುವಪೀಳಿಗೆ ಜಾಗೃತಗೊಳಿಸಬೇಕಿದೆ. ಧಾರ್ಮಿಕ ತಳಹದಿಯಲ್ಲಿ ಅವರನ್ನು ನಡೆಸಬೇಕಿದೆ. ಮಕ್ಕಳಿಗೆ ಪಾಲಕರು ಉತ್ತಮ ಶಿಕ್ಷಣ ನೀಡಬೇಕು ಎಂದರು.

ಗ್ರಾಮಸ್ಥರು ಶ್ರೀಗಳನ್ನು ಮೆರವಣಿಗೆ ಮೂಲಕ ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು. ಗ್ರಾಮದ ಗೌಡರಾದ ಕೆ.ಎಸ್.ದೊರೆಸ್ವಾಮಿ, ಬಿಳುವಾಲ ದೇವರಾಜ್, ಪುಟ್ಟಸ್ವಾಮಿ, ಕುಮಾರ್ ಚಂದ್ರಣ್ಣ, ಚಂದ್ರು, ಶಿಕ್ಷಕ ಮುಗುಳಿಕಟ್ಟೆ ಲೋಕೇಶ್, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net