ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ವಲಯವನ್ನು ಬೇರೆ ಕಡೆಗೆ ವರ್ಗಾಯಿಸುವಂತೆ ಒತ್ತಾಯಿಸಿ, ಯದರೂರು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಆಕ್ರಂಪಾಷರಿಗೆ ಮನವಿ ಸಲ್ಲಿಸಿದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ ಬ್ಯಾಟಪ್ಪ ಮಾತನಾಡಿ, ಶ್ರೀನಿವಾಸಪುರ ತಾಲೂಕಿನ ಎದರೂರು ಗ್ರಾಮ ಬಳಿ ಸುಮಾರು ೧.೨೭೩ ಎಕರೆ ೨೪ವರೆ ಗುಂಟೆಯ ಜಮೀನಿನಲ್ಲಿ ಹಲವಾರು ಕುಟುಂಬಗಳು ದಶಕಗಳಿಂದ ಕೃಷಿ ವಲಯವನ್ನು ನಂಬಿಕೊAಡು, ಬದುಕು ರೂಪಿಸಿಕೊಂಡಿದ್ದಾರೆ.
ಇತ್ತೀಚೆಗೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕಾಯ್ದೆಯಡಿ, ಹೊರಡಿಸಿರುವ ಅಧಿಸೂಚನೆಯಲ್ಲಿ, ರೈತರ ಹೆಸರಿನ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಳ್ಳುವ ಅಧಿ ಸೂಚನೆ ಹೊರಡಿಸಲಾಗಿದೆ.
ರೈತರು ಸದರಿ ಜಮೀನಿನಲ್ಲಿ ರೇಷ್ಮೆ ಟೊಮೆಟೊ, ಹೈನುಗಾರಿಕೆ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಫಲವತ್ತಾದ ಜಮೀನಾಗಿದ್ದು, ಈಗಾಗಲೇ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇಂತಹ ಜಮೀನನ್ನು ಕೈಗಾರಿಕೆಗೆ ನೀಡಲು ಉದ್ದೇಶಿಸಿರುವುದು, ಕೃಷಿಗೆ ಮಾರಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಸೂಚನೆಯಲ್ಲಿ ಪ್ರಸ್ತಾಪಿಸಿರುವಂತೆ ಇಡೀ ಗ್ರಾಮದ ಎಲ್ಲಾ ದಿಕ್ಕುಗಳಲ್ಲೂ ಕೈಗಾರಿಕಾ ಸ್ಥಾಪನೆಗೆ ಉದ್ದೇಶಿಸಿದ್ದು, ಹಲವಾರು ಜಮೀನುಗಳಲ್ಲಿ ವಾಸಿಸಲು ಮನೆಗಳನ್ನು ಕಟ್ಟಿಕೊಂಡಿದ್ದು, ಸುಮಾರು ೧೫೦ಕ್ಕೂ ಅಧಿಕ ಮನೆಗಳಿಗೆ ತೊಂದರೆಯಾಗಲಿದೆ.
ಕಳೆದ ಜುಲೈ ೩೦ ರಂದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ, ತಾಲೂಕು ತಹಸಿಲ್ದಾರ್‌ಗೆ ಹಾಗೂ ಉಪ ನೊಂದಣಾಧಿಕಾರಿಗಳಿಗೆ ೧೦೪೪ ಎಕರೆ ಜಮೀನುಗಳನ್ನು ಯಾವುದೇ ರೀತಿಯಾದ ದಾಸ್ತಾವೇಜುಗಳನ್ನು ನೊಂದಾಯಿಸಬಾರದೆAದು ಆದೇಶಿಸಿದೆ.
ಇದರಿಂದ ರೈತರಿಗೆ ಸಹಕಾರಿ ಸಂಸ್ಥೆಗಳಲ್ಲಿ ಪಹಣಿ ಆಧಾರದ ಮೇಲೆ ಬಡ್ಡಿ ರಹಿತ ಸಾಲವನ್ನು ಪಡೆಯುವುದಕ್ಕೆ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಅವಕಾಶವಿರುವುದಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಕೂಡಲೇ ಈ ಆದೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅಕ್ರಂಪಾಷ ಯದರೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ವಲಯಕ್ಕೆ ಭೂಸ್ವಾಧೀನಪಡಿಸಿಕೊಂಡಿರುವ ವಿಷಯಕ್ಕೆ ಸಂಬAಧಿಸಿದAತೆ ಮುಂದಿನ ದಿನಗಳಲ್ಲಿ ರೈತರ ಸಭೆ ನಡೆಸಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ವಿ.ಸುಧಾಕರ್, ಮುಖಂಡ ಕೆ.ಕೆ.ಮಂಜು, ಗ್ರಾಮಸ್ಥರಾದ ಸುರೇಶ್ ಬಾಬು, ಹನುಮೇಗೌಡ, ಆದಿನಾರಾಯಣ, ವೆಂಕಟರವಣ, ಯದರೂರು ಗ್ರಾಮ ಪಂಚಾಯಿತಿ ಸದಸ್ಯ ರಮೇಶ್‌ಕುಮಾರ್, ಶ್ರೀರಾಮರೆಡ್ಡಿ ಇತರರು ಇದ್ದರು.
ಚಿತ್ರ ೦೩ ಕೆ.ಎಲ್.ಆರ್. ೦೨ : ಯದರೂರು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ. ಜಿಲ್ಲಾಧಿಕಾರಿ ಅಕ್ರಂಪಾಷ ರವರಿಗೆ ಮನವಿ.