ಮೊಬೈಲ್‌ನಿಂದ ನೈಜ ಕ್ರೀಡೆಗಳು ಮರೆ

kride
ಎನ್.ಆರ್.ಪುರದ ಕುವೆಂಪು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ವಲಯ ಮಟ್ಟದ ಪ್ರಾಥಮಿಕ ಶಾಲೆಯ ಕ್ರೀಡಾಕೂಟವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣಶೆಟ್ಟಿ ಉದ್ಘಾಟಿಸಿದರು.
Published on

ಎನ್.ಆರ್.ಪುರ: ಪಠ್ಯದ ಜತೆಗೆ ಕ್ರೀಡಾಕೂಟಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ ಹೇಳಿದರು.

ಗುರುವಾರ ಕುವೆಂಪು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ನಗರ ಹಾಗೂ ಗ್ರಾಮೀಣ ಭಾಗದ ಪ್ರಾಥಮಿಕ ವಿಭಾಗದ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಹಾಗೂ ಕಂಪ್ಯೂಟರ್‌ಗಳಿಂದ ನೈಜ ಕ್ರೀಡೆಗಳನ್ನು ಮರೆಯುತ್ತಿದ್ದಾರೆ. ಗ್ರಾಮೀಣ ಭಾಗದ ಕ್ರೀಡಾಕೂಟಗಳು ಜೀವಂತವಾಗಿರಬೇಕಾದರೆ ಇಂತಹ ಕ್ರೀಡಾಕೂಟಗಳು ನಡೆಯುತ್ತಿರಬೇಕು ಎಂದರು. ಕ್ರೀಡೆ ನಡೆಸುವುದರ ಜತೆಗೆ ಅನುದಾನವನ್ನು ಹೆಚ್ಚಾಗಿ ಬಿಡುಗಡೆ ಮಾಡಬೇಕು. ವಲಯಮಟ್ಟದಲ್ಲಿ ಉತ್ತಮ ಪ್ರದರ್ಶ ತೋರಿ ತಾಲೂಕುಮಟ್ಟಕ್ಕೆ ಆಯ್ಕೆಯಾಗಲಿ ಎಂದರು. ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಬೋಗೇಶಪ್ಪ ಮಾತನಾಡಿ, ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕ್ರೀಡಾಂಗಣ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೆ ತುಂಬಾ ತೊಂದರೆಯಾಗಿದೆ. ಮಕ್ಕಳಲ್ಲಿ ಕ್ರೀಡೆ ಬಗ್ಗೆ ಅಸಕ್ತಿ ಮೂಡಿಸಬೇಕು. ಆದರೆ ಅದಕ್ಕೆ ತಕ್ಕಂತೆ ದೈಹಿಕ ಶಿಕ್ಷಕರನ್ನು ಮತ್ತು ಆಟದ ಮೈದಾನವನ್ನು ಒದಗಿಸಬೇಕು ಎಂದರು.ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪುರುಷೋತ್ತಮ, ಸದಸ್ಯರಾದ ದೇವೇಂದ್ರ, ವಾಣಿ ನರೇಂದ್ರ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಮಕ್ಬುಲ್ ಅಹಮದ್ ಮಾತನಾಡಿದರು. ಶಾಲಾಭಿವೃದ್ದಿ ಸಮಿತಿಯ ಸದಸ್ಯರಾದ ಸಲೀಮ್, ಉದಯ್, ಮೇಘನಾ, ಶಕುಂತಲಾ, ಮುಖ್ಯ ಶಿಕ್ಷಕರಾದ ಸರಸ್ವತಿ, ಶಿಕ್ಷಕರಾದ ಚಂದ್ರ, ರಾಮನಾಯ್ಕ ಉಪಸ್ಥಿತರಿದ್ದರು. ತಾಲೂಕಿನ 10 ಶಾಲೆಯ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಪುರುಷೋತ್ತಮ, ದೇವೇಂದ್ರ, ವಾಣಿ ನರೇಂದ್ರ, ಮಕ್ಬುಲ್ ಅಹಮದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net