ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ತಾಲ್ಲೂಕಿನ ಮೇಡಿತಂಬಿಹಳ್ಳಿ ಗ್ರಾಮದ ನಿವಾಸಿ ಪಿಎಲ್‌ಡಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎಂ.ಹೆಚ್.ಶ್ರೀನಿವಾಸ್ ಮತ್ತು ವಿಟ್ಟಪ್ಪನಹಳ್ಳಿ ಸರ್ಕಾರಿ ಶಾಲಾ ಶಿಕ್ಷಕಿ ಸುಜಾತಾ ದಂಪತಿಗಳ ಪುತ್ರ ಎಂ.ಎಸ್.ಉಲ್ಲಾಸ್ ಯುಪಿಎಸ್ಸಿ ನಡೆಸುವ ಐಎಫ್‌ಎಸ್ ಪರೀಕ್ಷೆಯಲ್ಲಿ ೫೭ನೇ ರ‍್ಯಾಂಕ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮೇಡಿತಂಬಿಹಳ್ಳಿ ಗ್ರಾಮದವರಾದ ಉಲ್ಲಾಸ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ನಗರದ ಚಿನ್ಮಯ ವಿದ್ಯಾಲಯದಲ್ಲಿ ಮುಗಿಸಿದ್ದು, ಕಾಲೇಜು ಶಿಕ್ಷಣವನ್ನು ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಮುಗಿಸಿ ಉನ್ನತ ಶಿಕ್ಷಣವನ್ನು ಎನ್‌ಐಟಿಕೆ ಸೂರತ್ಕಲ್‌ನಲ್ಲಿ ಪೂರೈಸಿದ್ದಾರೆ. ಶಿಕ್ಷಣ ಸಂಯೋಜಕ ಕೆ.ಶ್ರೀನಿವಾಸ್ ಉಲ್ಲಾಸ್ ಸಾಧನೆಯನ್ನು ಶ್ಲಾಘಿಸಿ, ಅಭಿನಂದಿಸಿದ್ದಾರೆ.
ಚಿತ್ರ ೨೦ ಕೆ.ಎಲ್.ಆರ್. ೦೪ : ಐಎಫ್‌ಎಸ್‌ನಲ್ಲಿ ೫೭ನೇ ರ‍್ಯಾಂಕ್ ಸಾಧನೆ ಮಾಡಿರುವ ಕೋಲಾರ ತಾಲ್ಲೂಕಿನ ಮೇಡಿತಂಬಿಹಳ್ಳಿಯ ಉಲ್ಲಾಸ್.