ವಿಜಯವಾಣಿ ಸುದ್ದಿಜಾಲ ಕೋಲಾರ
ಸರ್ಕಾರ `ನನ್ನ ಶಾಲೆ ನನ್ನ ಜವಾಬ್ದಾರಿ' ರಾಜ್ಯಾದ್ಯಾಂತ ಪ್ರಸ್ತುತ ವರ್ಷದಲ್ಲಿ ಜಾರಿಗೊಳಿಸಿದ್ದು, ಹಳೆಯ ವಿದ್ಯಾರ್ಥಿಗಳು ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಎಸ್.ಡಿ.ಎಂ.ಸಿ ಸಹಕಾರದೊಂದಿಗೆ ಶಾಲೆಗಳ ಬಲವರ್ಧನೆಗೆ ಕ್ರಮವಹಿಸಿ ಎಂದು ಡಿಡಿಪಿಐ ಕೃಷ್ಣಮೂರ್ತಿ ಶಿಕ್ಷಕರಿಗೆ ಕರೆ ನೀಡಿದರು.
ನಗರ ಹೊರವಲಯದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್‌ನಲ್ಲಿ ಬೆಂಗಳೂರು ಮಲ್ಲೇಶ್ವಂನ ಮೇಘಶಾಲಾ ಟ್ರಸ್ಟ್ ವತಿಯಿಂದ ಜಿಲ್ಲೆಯ ೫೨ ಸರ್ಕಾರಿ ಶಾಲೆಗಳಿಗೆ ಬೋಧನಾ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ನಡೆಸಲು ಡಿಜಿಟಲ್ (ಟ್ಯಾಬ್) ಸಾಧನಗಳನ್ನು ವಿತರಿಸಿ ಅವರು ಮಾತನಾಡಿದರು.
ಡಿಜಿಟಲ್ ಯುಗದಲ್ಲಿ ಆಧುನಿಕ ಮಕ್ಕಳ ಕಲಿಕೆಗೆ ಪೂರಕವಾಗಿ ಸಾಧನಗಳ ಬಳಕೆ ಇಂದಿನ ಅಗತ್ಯವಾಗಿದೆ, ಖಾಸಗಿ ಶಾಲೆಗಳ ಪೈಪೋಟಿಗೆ ಅನುಗುಣವಾಗಿ ಸರ್ಕಾರಿ ಶಾಲೆಗಳಲ್ಲೂ ಮಕ್ಕಳಿಗೆ ಇಂತಹ ಸೌಲಭ್ಯ ಒದಗಿಸುವ ಪ್ರಯತ್ನ ನಡೆಯುತ್ತಿರುವುದು ಶ್ಲಾಘನೀಯ. ಡಯಟ್ ಪ್ರಾಂಶುಪಾಲರ ಪ್ರಯತ್ನ ಮೆಚ್ಚುವಂತದ್ದು ಎಂದರು.
ತAತ್ರಾAಶ ಆಧಾರಿತ ಬೋಧನೆ ಅಗತ್ಯ :
ಡಯಟ್ ಪ್ರಾಂಶುಪಾಲ ಚಂದ್ರ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಮೇಘಶಾಲಾ ಸಂಸ್ಥೆಯು ಶಿಕ್ಷಣ ಇಲಾಖೆಯ ಜೊತೆ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಶಿಕ್ಷಕರ ಬೋಧನಾ ಪ್ರಕ್ರಿಯೆಯನ್ನು ಸುಲಭೀಕರಿಸಲು ಮತ್ತು ತಂತ್ರಜ್ಞಾನ ಆಧಾರಿತ ಬೋಧನಾ ಪ್ರಕ್ರಿಯೆಯನ್ನು ಉತ್ತೇಜಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕೋಲಾರ ಜಿಲ್ಲೆಯ ೫೨ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪ್ರತಿ ಶಾಲೆಗೆ ೦೩ ಇ-ಕಂಟೆAಟ್ ಒಳಗೊಂಡ ಟ್ಯಾಬ್‌ಗಳನ್ನು ಮೇಘ ಶಾಲಾ ಸಂಸ್ಥೆವತಿಯಿAದ ಉಚಿತವಾಗಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ನಿರಂತರವಾಗಿ ತಾಂತ್ರಿಕ ಒತ್ತಾಸೆಯಾಗಿ ಸಹ ಕೆಲಸ ನಿರ್ವಹಿಸಲಿದ್ದು, ಶಿಕ್ಷಕರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಆಗುತ್ತಿರುವ ಗುಣಾತ್ಮಕ ಶಿಕ್ಷಣದ ವ್ಯತ್ಯಾಸವನ್ನು ಸರಿದೂಗಿಸಲು ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ. ಸರ್ಕಾರ `ನನ್ನ ಶಾಲೆ ನನ್ನ ಜವಾಬ್ದಾರಿ' ರಾಜ್ಯಾದ್ಯಾಂತ ಪ್ರಸ್ತುತ ವರ್ಷದಲ್ಲಿ ಜಾರಿಗೊಳಿಸಲಾಗಿದೆ. ಕೋಲಾರ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರದೊಂದಿಗೆ ಈ ಯೋಜನೆಯನ್ನು ವಿಸ್ತರಿಸುವುದಾಗಿ ತಿಳಿಸಿದರು.
ಅನುಷ್ಠಾನ ವ್ಯವಸ್ಥಾಪಕ ನಾಗರಾಜು ಮಾತನಾಡಿ, ಈ ಮೇಘಶಾಲಾ ಟ್ರಸ್ಟ್ ವತಿಯಿಂದ ನೀಡುವ ಟ್ಯಾಬ್‌ಗಳು ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಅನುಸರಿಸಲಾಗುವ ಪಠ್ಯಕ್ರಮಕ್ಕೆ ಅನುಗುಣವಾಗಿ ವಿಷಯವನ್ನು ಚಿತ್ರ ಮತ್ತು ವಿಡಿಯೋ ಮೂಲಕ ಅಪ್ಲೋಡ್ ಮಾಡಲಾಗಿದೆ ಎಂದರು.
ಇದು ತರಗತಿಯಲ್ಲಿ ಮಕ್ಕಳಿಗೆ ಕಲಿಯುವ ಆಸಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಿ, ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವು ಒದಗಿಸುವ ಉದ್ದೇಶವಿದೆ ಎಂದರು.
ಕಾರ್ಯಕ್ರಮದಲ್ಲಿ ಡಯಟ್ ಹಿರಿಯ ಉಪನ್ಯಾಸಕ ತಿಮ್ಮಯ್ಯ, ಮೇಘಶಾಲಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಎನ್.ನಂಜುAಡಯ್ಯ, ಉಪನ್ಯಾಸಕ ಬಾಲಾಜಿ ಡಾ.ಎಂ.ನಾರಾಯಣಸ್ವಾಮಿ ಮುಂತಾದವರು ಇದ್ದರು.
ಚಿತ್ರ ೦೮ ಕೆ.ಎಲ್.ಆರ್. ೦೫ : ಕೋಲಾರ ಹೊರವಲಯದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್‌ನಲ್ಲಿ ಬೆಂಗಳೂರು ಮಲ್ಲೇಶ್ವಂನ ಮೇಘಶಾಲಾ ಟ್ರಸ್ಟ್ ವತಿಯಿಂದ ಜಿಲ್ಲೆಯ ೫೨ ಸರ್ಕಾರಿ ಶಾಲೆಗಳಿಗೆ ನೀಡಲಾದ ಡಿಜಿಟಲ್ (ಟ್ಯಾಬ್) ಸಾಧನಗಳನ್ನು ಡಿಡಿಪಿಐ ಕೃಷ್ಣಮೂರ್ತಿ ವಿತರಿಸಿದರು.