ಮೂವರು ಕಳ್ಳರ ಬಂಧನ

IMG-20220822-WA0008.jpg
Published on

ರಾಯಚೂರು

ಸಿಂಧನೂರಿನಲ್ಲಿ ನಡೆದಿದ್ದ ಕಳವಿನ ಪ್ರಕರಣದ ಮೂವರು ಆರೋಪಿಗಳ ಬಂಧಿಸಿ, 46.23 ಲಕ್ಷ ರುಪಾಯಿ ಜಪ್ತಿ‌ ಮಾಡಲಾಗಿದೆ.

ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ನಡೆದಿದ್ದ ಕಳವು ಪ್ರಕರಣ. ಸೈಯದ್ ಜುಬೇರ್, ಸೈಯದ್ ಖಲಂದರ್ ಹಾಗೂ ಗಣೇಶ್ ಬಂಧಿತರು.

ಗಣೇಶ್ ಬೀಡಿ ಮಾರಾಟ ಮಾಡಿ ಬಂದ ಹಣವನ್ನು ಟಾಟಾ ಟರ್ಬೋ ಕಂಟೇನರ್ ನಲ್ಲಿರಿಸಿ ಊಟಕ್ಕೆ ತೆರಳಿದ ವೇಳೆ ವಾಹನದಲ್ಲಿದ್ದ ಹಣ ಕಳ್ಳರು ಲೂಟಿ ಮಾಡಿದ್ದರು. ವಾಹನ ಚಾಲಕ ಮತ್ತು ಆತನ ಸಹಚರರಿಂದಲೇ ಕೃತ್ಯ. ಕಳ್ಳರು ಬಳಸಿದ್ದ ಬೈಕ್ ಸಹ ಜಪ್ತಿ.

ಸಿಂಧನೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು. ಅಪರಾಧ ನಡೆದ ೪೮ ಗಂಟೆಗಳಲ್ಲಿ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಆರೋಪಿಗಳ ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net