ಮೂರು ತಿಂಗಳ ನಂತರ ಧ್ವಜ ಹಾರಿಸಲು ಬರುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು / ಪೂರ್ಣಗೊಳ್ಳದ ಕಾಮಗಾರಿಗಳ ಉದ್ಘಾಟಣೆಗೆ ಸಜ್ಜಾಗಿರುವ ಜಿಲ್ಲಾಡಳಿತ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್ ಮುನಿವೆಂಕಟೇಗೌಡ
ಮೂರು ತಿಂಗಳ ನಂತರ ಜಿಲ್ಲೆಗೆ ಆಗಮಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು ತರಾತುರಿಯಲ್ಲಿ ಪೂರ್ಣಗೊಳ್ಳದ ಸ್ಟೇಡಿಯಂ ಸಿಂಥೆಟಿಕ್ ಟ್ರಾಕ್ ಹಾಗೂ ತಾಲ್ಲೂಕು ಕಛೇರಿ ಮುಂಭಾಗ ನಿರ್ಮಾಣಗೊಂಡಿರುವ ಸಾರ್ವಜನಿಕ ಸಂಪರ್ಕ ಕೇಂದ್ರವನ್ನು ಆ.೧೫ ರಂದು ಉದ್ಘಾಟನೆಗೆ ಜಿಲ್ಲಾಡಳಿತ ಮುಂದಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಕೆ.ಡಿ.ಎ. ಸಭೆಯನ್ನು ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ನಂತರ ಸಂಸದರ ಚುನಾವಣೆ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆಯ ಸಮಯದಲ್ಲಿ ಪ್ರಚಾರಕ್ಕೆ ಕೋಲಾರಕ್ಕೆ ಆಗಮಿಸಿದ್ದರು.

ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳು ಇದ್ದರು, ಸಮಸ್ಯೆಗಳ ಕಡೆ ತಿರುಗಿಯೂ ನೋಡದೆ ಜಿಲ್ಲಾ ಉಸ್ತುವಾರಿ ಸಚಿವರು ಆ.೧೫ ರಂದು ಸ್ಟೇಡಿಯಂನಲ್ಲಿ ಧ್ವಜಾರೋಹಣ ನೆರವೇರಿಸಲು ಆಗಮಿಸುತ್ತಿದ್ದಾರೆ. ಸ್ಟೇಡಿಯಂ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಆದರೂ ಸಹ ಉದ್ಘಾಟಣೆಗೆ ಮುಂದಾಗಿದ್ದಾರೆ. ಅಥ್ಲೆಟಿಕ್ ಅಸೋಸಿಯೇಷನ್ ಜಿಲ್ಲಾ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯದರ್ಶಿ ಜಯದೇವ್ ಮತ್ತು ಸದಸ್ಯರು ಪೂರ್ಣಗೊಳ್ಳದ ಕಾಮಗಾರಿಯನ್ನು ಉದ್ಘಾಟಣೆ ಮಾಡಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕು ಕಛೇರಿ ಮುಂಭಾಗ ನಿರ್ಮಾಣಗೊಳ್ಳುತ್ತಿರುವ ಸಾರ್ವಜನಿಕ ಸಂಪರ್ಕ ಕೇಂದ್ರದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆ.೧೫ ರಂದೇ ಉದ್ಘಾಟಣೆ ಮಾಡಬೇಕೆಂದು ತರಾತುರಿಯಲ್ಲಿ ಕಟ್ಟಡದ ಪ್ಲಾಸ್ಟಿಂಗ್ ಕ್ಯೂರಿಂಗ್ ಆಗುವ ಮೊದಲೇ ಸುಣ್ಣ ಬಣ್ಣ ಬಳಿದು ನೆಲ ಹಾಸಿಗೆ ಗ್ರಾನೈಟ್ ಹಾಸಿ ಉದ್ಘಾಟನೆಗೆ ಸಜ್ಜುಗೊಳಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಸಚಿವರನ್ನು ಅದಲು ಬದಲು ಮಾಡುತ್ತಾರೆ ಎಂಬ ಸುದ್ದಿ ಇರುವಾಗಲೇ ಕೋಲಾರದ ಜಿಲ್ಲಾ ಉಸ್ತುವಾರಿ ಸಚಿವರು ಬದಲಾವಣೆ ಆಗುತ್ತಾರೆಂದು ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಉದ್ಘಾಟಣೆ ಮಾಡಲು ಮುಂದಾಗಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಕಾಂಗ್ರೇಸ್‌ನಿAದ ಆಯ್ಕೆಯಾಗಿರುವ ನಾಲ್ಕು ಜನ ಶಾಸಕರಿದ್ದರು, ಮಂತ್ರಿಗಿರಿ ಯಾರಿಗೂ ದಕ್ಕಲಿಲ್ಲ. ಹೊರಗಿನವರನ್ನು ಜಿಲ್ಲಾ ಮಂತ್ರಿಯನ್ನಾಗಿ ನೇಮಕ ಮಾಡಿದ್ದಾರೆ. ಕೋಲಾರ ಮೂಲದವರೇ ಆದ ಕೃಷ್ಣಬೈರೇಗೌಡರು ಮಂತ್ರಿಯಾಗಿದ್ದರೂ ಅವರಿಗೆ ಕೋಲಾರ ನೀಡಲಿಲ್ಲ. ಹಾಗೂ ಕೆ.ಹೆಚ್.ಮುನಿಯಪ್ಪ ೭ ಬಾರಿ ಕೋಲಾರ ಜಿಲ್ಲೆಯಿಂದ ಸಂಸದರಾಗಿ ಆಯ್ಕೆಯಾಗಿ ನಂತರ ಪರಾಭವಗೊಂಡ ನಂತರ ದೇವನಹಳ್ಳಿಯಲ್ಲಿ ಶಾಸಕನಾಗಿ ಆಯ್ಕೆಯಾಗಿ ಮಂತ್ರಿ ಸ್ಥಾನವನ್ನು ಅವರಿಗೂ ಸಹ ಕೋಲಾರ ಉಸ್ತುವಾರಿಯನ್ನು ನೀಡದೆ ಹೊರಗಿನವರಿಗೆ ಉಸ್ತುವಾರಿ ನೀಡಿರುವ ಕಾರಣ ಕೋಲಾರ ಜಿಲ್ಲೆಯನ್ನು ನಿರಂತರವಾಗಿ ಹೊರಗಿನವರು ಕಡೆಗಣಿಸುತ್ತಾ ಬಂದಿದ್ದಾರೆ ಎಂದು ಆರೋಪ ಇದೆ.

ಅದರಂತೆ ಕಳೆದ ಫೆಬ್ರವರಿ ತಿಂಗಳಿನಲ್ಲಿ ಕೆ.ಡಿ.ಎ ಸಭೆ ನಡೆಸಿ ಹೋದ ಜಿಲ್ಲಾ ಉಸ್ತುವಾರಿ ಸಚಿವರು ಇಂದು ನಡೆಯಲಿರುವ ಸ್ವಾತಂತ್ರೊö್ಯÃತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣೆ ಮಾಡಲು ಆಗಮಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭವಾಗಿದೆ. ಕೋಲಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ರಸ್ತೆಗಳು ಅಭಿವೃದ್ಧಿಯಾಗಬೇಕಾಗಿದೆ. ಕೋಲಾರ ನಗರದಲ್ಲಿ ರಸ್ತೆಗಳು ಮತ್ತು ಚರಂಡಿಗಳು ಇಲ್ಲದೆ ನೀರು ರಸ್ತೆಗಳ ಮೇಲೆ ಹರಿಯುವಂತಾಗಿದೆ. ನಗರಾಭಿವೃದ್ಧಿ ಸಚಿವರಾಗಿರುವ ಬೈರತಿ ಸುರೇಶ್ ರವರ ಉಸ್ತುವಾರಿ ವಹಿಸಿರುವ ನಗರದಲ್ಲಿ ರಸ್ತೆಗಳು ಹಾಳಾಗಿವೆ. ಜಿಲ್ಲೆಯಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳು ಇದ್ದರು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಕಡೆ ಗಮನ ಹರಿಸುತ್ತಿಲ್ಲವೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗತೊಡಗಿದೆ.

ಚಿತ್ರ ೧೪ ಕೆ.ಎಲ್.ಆರ್. ೦೪ : ನಗರದ ತಾಲ್ಲೂಕು ಕಛೇರಿ ಆವರಣದಲ್ಲಿ ತರಾತುರಿಯಲ್ಲಿ ಉದ್ಘಾಟಣೆಗೆ ಸಜ್ಜಾಗಿರುವ ಸಾರ್ವಜನಿಕ ಸಂಪರ್ಕ ಕೇಂದ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net