ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಮುದುವಾಡಿ ದೊಡ್ಡ ಕೆರೆ ಕೋಡಿ ಬಿದ್ದಿದೆ. ಈ ವರ್ಷದ ಪ್ರಥಮ ಕೋಡಿ ಬಿದ್ದಿರುವುದು ಇದೇ ಕೆರೆಯಾಗಿದೆ. ಜಿಲ್ಲೆಯ ಆಯ್ದ ಕೆರೆಗಳಲ್ಲಿ ಮುದುವಾಡಿ ಕೆರೆಯು ಒಂದಾಗಿದ್ದು, ಇದು ಕೆ.ಸಿ.ವ್ಯಾಲಿ ನೀರು ಹರಿಯುವ ಮಾರ್ಗದಲ್ಲಿರುವ ಕಾರಣ ಕೆ.ಸಿ.ವ್ಯಾಲಿ ನೀರಿನ ಜೊತೆಗೆ ಇತ್ತೀಚೆಗೆ ಜಿಲ್ಲೆಯಲ್ಲಿ ಬೀಳುತ್ತಿರುವ ಮಳೆಯ ನೀರು ಸೇರಿ ಗುರುವಾರ ಬೆಳ್ಳಿಗ್ಗೆ ಯಿಂದ ಕೋಡಿ ಬಿದ್ದಿದ್ದು, ಕೋಲಾರ ಶ್ರೀನಿವಾಸಪುರ ರಸ್ತೆಯ ಮಾರ್ಗದಲ್ಲಿ ಇರುವ ಕೆರೆಯಾದ ಕಾರಣ ಕೆರೆಕೋಡಿಯ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ನೋಡುಗರಿಗೆ ಪ್ರವಾಸಿ ತಾಣವಾಗಿ ಕಾಣುತ್ತಿದೆ.
ಕೆ.ಸಿ.ವ್ಯಾಲಿ ಒಂದನೇ ಹಂತದ ನೀರು ಕೆರೆಗಳಿಗೆ ಹರಿಸಿದಾಗ ೨೦೨೦ ಡಿಸೆಂಬರ್ ತಿಂಗಳಲ್ಲಿ ಮುದುವಾಡಿ ಕೆರೆ ಕೋಡಿ ಬಿದ್ದಿತ್ತು. ಈ ಕೆರೆಯ ಹಿಂದಿನ ಸಾಲಿನ ಅಂದರೆ ಎಸ್.ಅಗ್ರಹಾರ ಮತ್ತು ಜನ್ನಘಟ್ಟ ದೊಡ್ಡಕೆರೆಗಳು ತುಂಬಿ ಕೋಡಿ ಬಿದ್ದ ನಂತರ ಮುದುವಾಡಿ ದೊಡ್ಡಕೆರೆಯು ಕೋಡಿ ಬಿದ್ದಿತ್ತು. ಆ ವರ್ಷ ಮಳೆಯು ಚೆನ್ನಾಗಿ ಆದ ಕಾರಣ ಕೆ.ಸಿ.ವ್ಯಾಲಿ ನೀರು ಸುಮಾರು ೧೫೦ಕ್ಕೂ ಹೆಚ್ಚು ಕೆರೆಗಳಿಗೆ ಹರಿದಿತ್ತು. ಈ ನೀರಿನ ಜೊತೆಗೆ ಮಳೆ ನೀರು ಸೇರಿ ಜಿಲ್ಲೆಯಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ಕೆರಗಳು ಕೋಡಿ ಹರಿದವು.
ಸುಮಾರು ೨೦ ವರ್ಷಗಳಿಂದ ತುಂಬಿಲ್ಲದAತಹ ಕೆರೆಗಳಿಗೆ ನೀರು ಬಂದಿತ್ತಲ್ಲದೆ ಕೋಡಿ ಹರಿದ ಕಾರಣ ಆ ಭಾಗದ ಜನರಲ್ಲಿ ಸಂತಸ ಉಂಟಾಗಿತ್ತು. ಕೆರೆ ಅಚ್ಚುಕಟ್ಟು ಪ್ರದೇಶಗಳ ಗ್ರಾಮಸ್ಥರು ದೀಪೋತ್ಸವವನ್ನು ಸಹ ನಡೆಸಿ ಸಂತಸ ವ್ಯಕ್ತಪಡಿಸಿದರು. ಕೆ.ಸಿ.ವ್ಯಾಲಿ ನೀರು ಕೋಲಾರ ಜಿಲ್ಲೆಯ ಲಕ್ಷಿö್ಮÃಸಾಗರ ಕೆರೆಯಿಂದ ನರಸಾಪುರ ಕೆರೆಯ ಮೂಲಕ ಹಂತ ಹಂತವಾಗಿ ಕೋಲಾರ ತಾಲ್ಲೂಕು ಹಾಗೂ ಶ್ರೀನಿವಾಸಪುರ ತಾಲ್ಲೂಕು ಮತ್ತು ಚಿಂತಾಮಣಿ ತಾಲ್ಲೂಕಿನ ಕೆಲವು ಕೆರೆಗಳಿಗೆ ನೀರು ಹರಿದಾಗ ಸಾರ್ವಜನಿಕರು ತಂಡೋಪತAಡವಾಗಿ ಕೆರೆಗಳಿಗೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸುತ್ತಿದ್ದರು.
ಅದೇ ವರ್ಷ ಮಳೆಯು ಹೆಚ್ಚಾಗಿ ಸುಮಾರು ಕೆರೆಗಳು ಕೋಡಿ ಬಿದ್ದವು. ಕೆ.ಸಿ.ವ್ಯಾಲಿ ಹರಿಯದೇ ಇರುವ ಕೆರೆಗಳು ಸಹ ಕೋಡಿ ಬಿದ್ದವು. ೨೦೨೧ರಲ್ಲಿ ಸಹ ಕೆಲವು ಕೆರೆಗಳು ಕೋಡಿ ಬಿದ್ದವು. ಆಗ ಒಂದು ವರ್ಷದ ಹಿಂದೆಯೇ ಕೆರೆಗಳಲ್ಲಿ ನೀರಿದ್ದ ಕಾರಣ ಮೀನುಗಳು ಉತ್ಪತ್ತಿಯಾಗಿ ಕೋಡಿಬಿದ್ದು, ನೀರು ಹರಿಯುತ್ತಿದ್ದ ಕಾಲುವೆಗಳಲ್ಲಿ ಮೀನು ಹಿಡಿದು ಖುಷಿ ಪಟ್ಟರು.
ಕೋಲಾರ ಜಿಲ್ಲೆಯಲ್ಲಿ ೨೫೦೦ಕ್ಕೂ ಹೆಚ್ಚು ಕೆರೆಗಳಿವೆ. ಮಳೆಯಿಲ್ಲದೆ ಬರಡು ಭೂಮಿಯಾದ ಕಾರಣ ಕೆರೆಗಳು ಬತ್ತಿಹೋಗಿದ್ದವು. ಕೆರೆಗಳ ಆಕಾರವನ್ನು ಕಳೆದುಕೊಂಡಿದ್ದವು. ಒತ್ತುವರಿದಾರರು ರಾಜಕಾಲುವೆ ಹಾಗೂ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದರು. ಸುಮಾರು ೨೫ ವರ್ಷಗಳಿಂದ ಕೆರೆಗಳಿಗೆ ನೀರು ಬರದ ಕಾರಣ ಕೆರೆಗಳ ಕಡೆ ಮುಖಮಾಡುವುದನ್ನು ಸಾರ್ವಜನಿಕರು ಮರೆತ್ತಿದ್ದರು.
೨೦೧೩ರಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೆ.ಸಿ.ವ್ಯಾಲಿ ಯೋಜನೆಯನ್ನು ಕೈಗೆತ್ತುಕೊಂಡು ೨೦೧೮ರ ಚುನಾವಣೆಯ ಸಂದರ್ಭದಲ್ಲಿ ಕೆ.ಸಿ.ವ್ಯಾಲಿ ನೀರು ಪ್ರಥಮವಾಗಿ ಕೋಲಾರ ಜಿಲ್ಲೆಗೆ ಹರಿಸಲಾಯಿತು. ಆಭಾಗವನ್ನು ೧ನೇ ಹಂತದಲ್ಲಿ ೧೨೬ ಕೆರೆಗಳಿಗೆ ನೀರು ಹರಿಸುವ ಯೋಜನೆಯಾಗಿದ್ದರು ಸುಮಾರು ೧೫೦ ಕೆರೆಗಳಿಗೆ ನೀರು ಹರಿಸಿದರು. ಈಗ ಮತ್ತೆ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ೨ನೇ ಹಂತದ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ೧೭೬ ಕೆರೆಗಳಿಗೆ ಡಿಸೆಂಬರ್ ಅಂತ್ಯದೊಳಗಾಗಿ ನೀರು ಹರಿಸಲು ಸರ್ಕಾರ ಸಿದ್ಧವಾಗಿದ್ದು, ೨ನೇ ಹಂತದ ಯೋಜನೆಯಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಯುವ ಸಾಧ್ಯತೆ ಇದೆ.
ಕೋಟ್
ಕೆ.ಸಿ.ವ್ಯಾಲಿ ಯೋಜನೆ ನೀರಿನಿಂದ ೨೦ ವರ್ಷಗಳ ನಂತರ ಮುದುವಾಡಿ ಕೆರೆಗೆ ನೀರು ಬಂದು ೨೦೨೦ರಲ್ಲಿ ಕೋಡಿ ಹರಿಯುವಂತೆ ಆಯಿತು. ೨೦೨೧ರಲ್ಲಿ ಮತ್ತು ೨೦೨೨ರಲ್ಲಿಯೂ ಕೋಡಿ ಹರಿಯಿತು. ಈಗ ಮತ್ತೆ ಕೋಡಿ ಹರಿಯುತ್ತಿದೆ. ಇದರಿಂದ ಅಂತರ್ಜಲ ವೃದ್ಧಿಯಾಗಿದೆ. ಕೊಳವೆ ಬಾವಿಗಳಲ್ಲಿ ನೀರು ೨೦೦ ಅಡಿಗಳಿಗೆ ಸಿಗುವಂತೆ ಆಗಿದೆ. ಕೆ.ಸಿ.ವ್ಯಾಲಿ ಕೋಲಾರ ಜಿಲ್ಲೆಗೆ ತರುವಲ್ಲಿ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ರವರ ಪ್ರಯತ್ನ ಆಗಿದೆ. ಅವರು ಸೋತ ನಂತರ ೨ ವರ್ಷಗಳ ಕಾಲ ಮತ್ತೆ ನೀರು ಹರಿಯುವ ಯೋಜನೆಗೆ ಹಿನ್ನಡೆಯಾಗಿತ್ತು. ಮತ್ತೆ ಈಗ ನೀರು ಹರಿಯುವಿನ ಪ್ರಮಾಣ ಹೆಚ್ಚಾಗಿರುವ ಕಾರಣ ಮತ್ತೆ ಕೆರೆಗಳು ತುಂಬಿ ಮಳೆನೀರಿನ ಜೊತೆಗೆ ಕೋಡಿ ಹರಿಯುತ್ತಿದೆ. ಮುದುವಾಡಿ ಕೆರೆ ಕೋಲಾರ ಶ್ರೀನಿವಾಸಪುರ ಮುಖ್ಯ ರಸ್ತೆಯಲ್ಲಿರುವ ಕಾರಣ ಕೆರೆಯನ್ನು ಪ್ರವಾಸಿ ತಾಣವಾಗಿ ಮಾಡಬೇಕಾಗಿದೆ.
-ಸಂಪತ್, ಕಿತ್ತಂಡೂರು.
ಚಿತ್ರ ೧೮ ಕೆ.ಎಲ್.ಆರ್. ೦೧ : ಮುದುವಾಡಿ ದೊಡ್ಡಕೆರೆ ಕೋಡಿ ಹರಿಯುತ್ತಿರುವುದು.
ಚಿತ್ರ ೧೮ ಕೆ.ಎಲ್.ಆರ್. ೦೧ಎ : ಸಂಪತ್, ಕಿತ್ತಂಡೂರು ರವರ ಭಾವಚಿತ್ರ