ಮುಡಾ ಅಧಿಕಾರಿ ಅಮಾನತು

crime
Published on

ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪದ ಮೇರೆಗೆ ಮುಡಾ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಮುಡಾದಲ್ಲಿ ವ್ಯವಸ್ಥಾಪಕ ಆಗಿ ಕಾರ್ಯ ನಿರ್ವಹಿಸುತ್ತಿರುವ ಸೋಮಸುಂದ್ರು ಅಮಾನತು ಆದ ನೌಕರ.

ಸೋಮಸುಂದ್ರು ಮುಡಾ ಕಾರ್ಯದರ್ಶಿ ಅವರಿಗೆ ಇರುವ ಅಧಿಕಾರವನ್ನು ತಾವು ದುರ್ಬಳಕೆ ಮಾಡಿಕೊಂಡು ಕಾರ್ಯದರ್ಶಿ ಅವರ ಅನುಮತಿ ಪಡೆಯದೇ ಗೋಕುಲಂ ಮೂರನೇ ಹಂತದಲ್ಲಿನ ಬಡಾವಣೆಯಲ್ಲಿನ ನಿವೇಶನದ ಅಳತೆಯ ತಿದ್ದುಪಡಿ ಕ್ರಯ ಪತ್ರವನ್ನು ನೀಡಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ವಿಚಾರಣೆ ನಡೆಸಲಾಗಿದ್ದು, ಮೇಲ್ನೊಟಕ್ಕೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಕರ್ತವ್ಯ ಲೋಪವೇಸಗಿರುವುದರಿಂದ ಅಮಾನತು ಪಡಿಸಿ ಮುಡಾ ಆಯುಕ್ತರು ಆದೇಶ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net