ವಿಜಯವಾಣಿ ಸುದ್ದಿಜಾಲ ಕೋಲಾರ
ಅಂಗನವಾಡಿ ಸಹಾಯಕಿ ರಾಕ್ಷಸಿಯಂತೆ ವರ್ತಿಸಿ ಏನು ಅರಿಯದ ಮುಗ್ದ ಮಗುವಿಗೆ ಬೆಂಕಿಯಿAದ ಸುಟ್ಟು ಗಾಯಗೊಳಿಸಿರುವ ಅಮಾನವೀಯ ಘಟನೆ ಕೋಲಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ನಿಡಘಟ್ಟ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕಿರುಕುಳ ನೀಡಿ, ಬೆಂಕಿಯಿAದ ಸುಟ್ಟಿರುವ ಅಮಾನವೀಯ ಕೃತ್ಯವನ್ನು ಅಂಗನವಾಡಿ ಸಹಾಯಕಿ ಶ್ರೀದೇವಿ ಎಸಗಿರುವುದಾಗಿ ಬೆಳಕಿಗೆ ಬಂದಿದೆ.
ಮಾಲೂರು ತಾಲ್ಲೂಕು, ನಿಡಘಟ್ಟ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ೧೭ ಕ್ಕೂ ಹೆಚ್ಚು ಮಕ್ಕಳನ್ನ ಪೋಷಣೆ ಮಾಡುತ್ತಿದ್ದು, ಇದೇ ಗ್ರಾಮದ ಮುನಿರಾಜು ಹಾಗೂ ಮುನಿಯಮ್ಮ ರವರ ನಾಲ್ಕು ವರ್ಷದ ಹೆಣ್ಣು ಮಗುವಿನ ಕೈ ಕುತ್ತಿಗೆ ಎದೆಯ ಭಾಗದಲ್ಲಿ ಬೆಂಕಿಯಿAದ ಸುಟ್ಟ ಗಾಯಗಳಾಗಿವೆ. ಅಲ್ಲದೆ ಈ ಹಿಂದೆಯು ಸಹ ಸಹಾಯಕಿ ಶ್ರೀದೇವಿ ಈ ಮಗುವಿಗೆ ಕಾಲಿನ ಮೇಲೆ ಸುಟ್ಟಿದ್ದು, ಊರಿನ ಗ್ರಾಮಸ್ಥರು ಅಂಗನವಾಡಿ ಸಹಾಯಕಿಗೆ ಬುದ್ದಿ ಹೇಳಿದ್ದರೂ ಸಹ ನಮ್ಮ ಮಗುವನ್ನೆ ಗುರಿಯಾಗಿಟ್ಟುಕೊಂಡು ಎರಡನೇ ಬಾರಿಗೆ ಕೃತ್ಯವನ್ನು ವೆಸಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಕೃತ್ಯದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಬೈರಾರೆಡ್ಡಿಗೆ ತಿಳಿಸಿದ್ದರೂ ನಡೆದ ಕೃತ್ಯವನ್ನು ಮುಚ್ಚಿಹಾಕಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಮಕ್ಕಳ ಪೋಷಣೆಗೆ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯ ಮಾಡುತ್ತಿದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಮಾತ್ರ ಅರಿಯದ ಮುಗ್ದ ಮಕ್ಕಳನ್ನ ಮೇಲೆ ಅಮಾನವೀಯ ಕೃತ್ಯಗಳು ವೆಸಗುತ್ತಿರುವುದರಿಂದ ಪೋಷಕರು ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಲು ಭಯಪಡುವಂತಾಗಿದೆ.
ಇನ್ನಾದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದು, ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಚಿತ್ರ ೨೦ ಕೆ.ಎಲ್.ಆರ್. ೦೨ : ನಿಡಘಟ್ಟ ಅಂಗನಾವಾಡಿ ಕೇಂದ್ರದ ಭಾವಚಿತ್ರ
ಚಿತ್ರ ೨೦ ಕೆ.ಎಲ್.ಆರ್. ೦೨ : ಬಾಲಕಿಗೆ ಅಂಗನವಾಡಿ ಸಹಾಯಕಿ ಕೈ ಮತ್ತು ಕತ್ತಿನ ಸುಟ್ಟ ಗಾಯಗಳನ್ನು ಮಾಡಿರುವುದು.