ಮುಖ್ಯರಸ್ತೆಯ ಗುಂಡಿ ಮುಚ್ಚಿ

7kls1 manavi
ಡಾ. ರಾಜ್ ಕನ್ನಡ ಸಂಘ ಮತ್ತು ಕರವೇ (ಪ್ರವೀಣ್ ಶೆಟ್ಟಿ) ಬಣ ಕಳಸ ತಹಸೀಲ್ದಾರ್ ಕಾವ್ಯಾಗೆ ಮನವಿ ಸಲ್ಲಿಸಿತು. ಶರೀಫ್, ಚೌಡ ನಾಯ್ಕ ಇತರರಿದ್ದರು.
Published on

ಕಳಸ: ಪಟ್ಟಣದ ಮುಖ್ಯರಸ್ತೆಯು ಗುಂಡಿಮಯವಾಗಿದ್ದು ಕೂಡಲೇ ಗುಂಡಿಗಳನ್ನು ಮುಚ್ಚಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಡಾ. ರಾಜ್ ಕನ್ನಡ ಸಂಘ ಮತ್ತು ಕರವೇ (ಪ್ರವೀಣ್ ಶೆಟ್ಟಿ) ಬಣ ಎಚ್ಚರಿಕೆ ನೀಡಿ ಕಳಸ ತಹಸೀಲ್ದಾರ್ ಕಾವ್ಯಾ ಅವರಿಗೆ ಮನವಿ ಸಲ್ಲಿಸಿದೆ.

ಡಾ. ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ಮಾತನಾಡಿ, ಕಳಸ ಮಂಜಿನಕಟ್ಟೆಯಂದ ಮಹಾವೀರ ವೃತ್ತ, ಕಳಸ ಕೈಮರದಿಂದ ಕಲಶೇಶ್ವರ ದೇವಸ್ಥಾನದವರೆಗಿನ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿದ್ದು ವಾಹನ ಸವಾರರಿಗೆ ತೀರ ತೊಂದರೆಯಾಗುತ್ತಿದೆ ಎಂದರು.

ಎರಡು ದಿನಗಳ ಹಿಂದೆಯಷ್ಟೇ ಕರ್ಣಾಟಕ ಬ್ಯಾಂಕ್ ಮುಂಭಾಗ ರಸ್ತೆಯಲ್ಲಿ ಗುಂಡಿಗೆ ಬೈಕ್ ಸವಾರರು ಬಿದ್ದು ಕೈ ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ರಸ್ತೆಯಲ್ಲಿ ಬಿದ್ದ ಗುಂಡಿಗಳಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದರೂ ಸಂಬಂಧಿಸಿದವರು ಕಣ್ಣುಮುಚ್ಚಿ ಕುಳಿತಿದ್ದಾರೆ. ಇಲ್ಲಿ ಯಾವುದೇ ಸಮಸ್ಯೆ ಬಂದರೂ ಪ್ರತಿಭಟನೆಯ ಮೂಲಕವೇ ಪರಿಹರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು. ಸಂಬಂಧಿಸಿದ ಇಲಾಖೆ ಒಂದು ವಾರದ ಒಳಗಾಗಿ ಗುಂಡಿ ಮುಚ್ಚಿಸಬೇಕು. ಇಲ್ಲವಾದರೆ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ ಇಲಾಖೆಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕರವೇ ಗೌರವಾಧ್ಯಕ್ಷ ಶರೀಫ್, ಅಧ್ಯಕ್ಷ ಚೌಡ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net