ಮುಖ್ಯ ಸಾಕ್ಷಿ ವಿಚಾರಣೆ ಆರಂಭ

Pocso
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.5787303, 0.47147304);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;
Published on

ಚಿತ್ರದುರ್ಗ: ಶಿವಮೂರ್ತಿ ಮುರುಘಾ ಶರಣರ ಮೇಲಿನ ಮೊದಲ ಪೋಕ್ಸೋ ಪ್ರಕರಣ ಸಂಬಂಧ ಸೋಮವಾರ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮುಖ್ಯ ಸಾಕ್ಷಿ ವಿಚಾರಣೆ ನಡೆಸಿತು.

ನ್ಯಾಯಾಧೀಶ ಗಂಗಾಧರಪ್ಪ ಚನ್ನಬಸಪ್ಪ ಅಡಪದ ಅವರು ಪೋಕ್ಸೋ ಪ್ರಕರಣದ ಸಾಕ್ಷಿ ವಿಚಾರಣೆಗೆ ಅವಕಾಶ ಮಾಡಿಕೊಟ್ಟರು. ಈ ಪ್ರಕರಣದಲ್ಲಿ ಮುಖ್ಯ ಸಾಕ್ಷಿಯಾಗಿರುವ ಸಂತ್ರಸ್ತ ಬಾಲಕಿಯಿಂದ ಇನ್ ಕ್ಯಾಮೆರಾ ಪ್ರಕ್ರಿಯೆ ಮೂಲಕ ವಿಚಾರಣೆ ನಡೆಸಿ, ಆಕೆಯಿಂದ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಜೂ. 11ರಂದು ಪ್ರಕರಣದ ಸಾಕ್ಷಿ ವಿಚಾರಣೆ ಮುಂದುವರೆಯಲಿದೆ.

ನ್ಯಾಯಾಧೀಶರ ಮುಂದೆ ಪ್ರಕರಣದ ಆರೋಪಿತರಾದ ಶಿವಮೂರ್ತಿ ಮುರುಘಾ ಶರಣರು, ರಶ್ಮಿ, ಪರಮಶಿವಯ್ಯ ಹಾಜರಾದರು. ಶಿವಮೂರ್ತಿ ಶರಣರ ಮೇಲಿನ 2ನೇ ಪ್ರಕರಣದ ವಿಚಾರಣೆಯನ್ನು 24ಕ್ಕೆ ಮುಂದೂಡಲಾಯಿತು.

ಸರ್ಕಾರಿ ಅಭಿಯೋಜಕ ಜಗದೀಶ್, ಆರೋಪಿತರ ಪರ ವಕೀಲ ಕೆ.ಬಿ.ಕೆ.ಸ್ವಾಮಿ, ವಿಶ್ವನಾಥಯ್ಯ, ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net