ಮುಂದಿನ ಪೀಳಿಗೆಯೂ ಕನ್ನಡ ತೇರು ಎಳೆಯುವಂತಾಗಲಿ

ಗೌಡಳ್ಳಿಯ ನವದುರ್ಗಾ ಪರಮೇಶ್ವರಿ ದೇವಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನೆ ಕಾರ್ಯಕ್ರಮವನ್ನು ಟಿ.ಪಿ.ರಮೇಶ್ ಉದ್ಘಾಟಿಸಿದರು. ನಯನತಾರ, ವಿಜೇತ್, ಮುನೀರ್ ಆಹಮ್ಮದ್, ರೇವತಿ ರಮೇಶ್, ಪಿ.ಕೆ.ರವಿ, ಮುತ್ತಣ್ಣ, ನಾಗರಾಜ್ ಇದ್ದರು.
16spt4
Published on


ಸೋಮವಾರಪೇಟೆ: ಕನ್ನಡಿಗರ ಬದುಕಿನಲ್ಲಿ ಕನ್ನಡ ಸಾರ್ವಭೌಮ ಸ್ಥಾನ ಪಡೆದುಕೊಳ್ಳಬೇಕೆಂಬುದು ಕನ್ನಡ ಸಾಹಿತ್ಯ ಸಮ್ಮೇಳನಗಳ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಫೆ.11ರಂದು ಗೌಡಳ್ಳಿಯಲ್ಲಿ ನಡೆದ ತಾಲೂಕು ಸಮ್ಮೇಳನ ಯಶಸ್ವಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಜಿಲ್ಲಾ ಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು.


ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದವರಿಗೆ ಶ್ರೀ ನವದುರ್ಗಾ ಪರಮೇಶ್ವರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನೆ ಮತ್ತು ಲೆಕ್ಕಪತ್ರ ಮಂಡನೆ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಸಾವಿರಾರು ಕನ್ನಡ ಮನಸ್ಸುಗಳು ಸಮ್ಮೇಳನದಲ್ಲಿ ಭಾಗಿಯಾಗಿದ್ದವು. ಅನೇಕ ಸಾಧಕರನ್ನು ಸನ್ಮಾನಿಸಲಾಯಿತು. ಸಮ್ಮೇಳನದ ಮೂಲಕ ಗೌಡಳ್ಳಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ವಿಶೇಷತೆಗಳು ಇಡೀ ಜಿಲ್ಲೆಗೆ ಪಸರಿಸುವಂತಾಯಿತು. ಕನ್ನಡ ಭಾಷಾ ಬೆಳವಣಿಗೆಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಮುಂದಿನ ಪೀಳಿಗೆಯೂ ಕನ್ನಡ ಸಂಸ್ಕೃತಿಯ ತೇರನ್ನು ಎಳೆಯಬೇಕು ಎಂದು ಹೇಳಿದರು.


ಸಮ್ಮೇಳನಾಧ್ಯಕ್ಷೆಯಾಗಿದ್ದ ಶ.ಗ.ನಯನ ತಾರಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷೆ ಶ್ರೀಮಂತವಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಎಲ್ಲರೂ ಕನ್ನಡ ಪ್ರೇಮ ಮೆರೆದಿದ್ದಾರೆ ಎಂದರು.


ಗೌಡಳ್ಳಿ ವೀರಭದ್ರಪ್ಪ, ನಾಗರಾಜ್, ಜ್ಯೋತಿ ಅರುಣ್ ಅವರನ್ನು ಸನ್ಮಾನಿಸಲಾಯಿತು. ಹಣಕಾಸು ಸಮಿತಿ ಅಧ್ಯಕ್ಷ ಪಿ.ಕೆ.ರವಿ ಲೆಕ್ಕಪತ್ರ ಮಂಡಿಸಿದರು. ವಿವಿಧ ಉಪ ಸಮಿತಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಸಮ್ಮೇಳನದ ಉಳಿಕೆ ಹಣದಲ್ಲಿ ಶ್ರೀ ಮಳೆಮಲ್ಲೇಶ್ವರ ದೇವಾಲಯ, ನವದುರ್ಗಾ ಪರಮೇಶ್ವರಿ ದೇವಾಲಯಕ್ಕೆ 15 ಸಾವಿರ ರೂ. ಸಹಾಯಧನ ನೀಡಲಾಯಿತು.


ಕ.ಸಾ.ಪ. ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುನೀರ್ ಆಹಮ್ಮದ್, ರೇವತಿ ರಮೇಶ್, ಆಹಾರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಪ್ರಮುಖರಾದ ಎಚ್.ಜೆ.ಜವರಪ್ಪ, ಎ.ಪಿ.ವೀರರಾಜು, ಎಚ್.ಆರ್.ಮುತ್ತಣ್ಣ, ಕೆ.ಪಿ.ದಿನೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net