ಮಾರುಕಟ್ಟೆ ನಿರ್ಮಿಸಲು ಉತ್ಪಾದಕರ ಹೋರಾಟ

suresh
ಹೆಗ್ಗೋಡಿನ ವನಿತಾ ಸಭಾಭವನದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮಕ್ಕೆ ಸಾಮಾಜಿಕ ಹೋರಾಟಗಾರ ಕೆ.ಪಿ.ಸುರೇಶ್ ಚಾಲನೆ ನೀಡಿದರು. ರಾಮಪ್ಪ ಹೊಸಕೊಟಿಗೆ, ಕೃತಿಪುರಪ್ಪಮನೆ, ಕೆ.ಬಿ.ಭಾಗೀರಥಿ, ಉಮಾಮಹೇಶ್ವರ ಹೆಗಡೆ, ಚಿದಂಬರರಾವ್ ಜಂಬೆ, ಕೆ.ಜಿ.ಕೃಷ್ಣಮೂರ್ತಿ, ಎನ್.ಎಂ.ಕುಲಕರ್ಣಿ, ಶ್ರೀಪಾದ್ ಭಾಗವತ್ ಇತರರಿದ್ದರು.
Published on

ಸಾಗರ: ಗ್ರಾಮೀಣ ಕರ್ನಾಟಕದ ಉತ್ಪಾದಕರು ಒಂಟಿ ಸೈನಿಕರಂತೆ ಹೋರಾಟ ಮಾಡುತ್ತಿದ್ದಾರೆ. ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರೂ ಬಂಡವಾಳ ಶಾಹಿಗಳ ಎದುರು ಸಲತೆ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಕೆ.ಪಿ.ಸುರೇಶ್ ಹೇಳಿದರು.

ಸಮೀಪದ ಹೆಗ್ಗೋಡಿನ ವನಿತಾ ಸಭಾಭವನದಲ್ಲಿ ಸಂಸ್ಕೃತಿ ಸಮಾಜ ಟ್ರಸ್ಟ್ ಕೇಡ್ಲೆಸರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಗ್ರಾಮೀಣ ಕರ್ನಾಟಕದ ಕೃಷಿ ಮತ್ತು ಕರಕುಶಲ ಕಸುಬುಗಳ ಕುರಿತು ಮಾತನಾಡಿದರು.
ಜಾಗತೀಕರಣದ ಪ್ರಕ್ರಿಯೆಯಿಂದಾಗಿ ಬಿತ್ತುವ ಬೀಜದಿಂದ ಅಂತಿಮ ಹಂತದಲ್ಲಿ ತಯಾರಾಗುವ ಉತ್ಪನ್ನದಾರವರಿಗೆ ಎಲ್ಲದರ ಹಿಂದೆ ಅದಾನಿ, ಅಂಬಾನಿಯಂತಹ ದೈತ್ಯ ಕಂಪನಿಗಳ ನೆರಳು ಚಾಚುತ್ತಿದೆ. ಸರ್ಕಾರಗಳು ರೂಪಿಸುವ ಉತ್ಪಾದಕ ಸ್ನೇಹಿ ಯೋಜನೆಗಳ ಲಾಭ ಪಡೆಯುವವರು ಕೂಡ ಇವೇ ಬಲಾಢ್ಯ ಬಂಡವಾಳಶಾಹಿದಾರರಾಗಿದ್ದಾರೆ ಎಂದರು.
ಕೃಷಿಕ ರಾಮಪ್ಪ ಹೊಸಕೊಟಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಳ್ಳಿಗಳ ಉತ್ಪನ್ನಗಳಿಗೆ ಯೋಗ್ಯ ಬೆಲೆ ಮತ್ತು ಮಾರುಕಟ್ಟೆ ರೂಪಿಸುವ ಪ್ರಯತ್ನ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸಂಸ್ಕೃತಿ ಸಮಾಜ ಟ್ರಸ್ಟ್ ಆಯೋಜಿಸಿರುವ ಕಾರ್ಯಕ್ರಮ ಅತ್ಯಂತ ಅವಶ್ಯವಾದುದು ಎಂದು ಹೇಳಿದರು. ಕಾರ್ಯಕ್ರಮದ ನಂತರ ರೈತರೊಂದಿಗೆ ಸಂವಾದ ನಡೆಸಿದರು.
ಕೃತಿಪುರಪ್ಪಮನೆ, ಕೆ.ಬಿ.ಭಾಗೀರಥಿ, ಉಮಾಮಹೇಶ್ವರ ಹೆಗಡೆ, ಚಿದಂಬರರಾವ್ ಜಂಬೆ, ಕೆ.ಜಿ.ಕೃಷ್ಣಮೂರ್ತಿ, ಎನ್.ಎಂ.ಕುಲಕರ್ಣಿ, ಶ್ರೀಪಾದ್‌ಭಾಗವತ್, ಪ್ರಸನ್ನ, ಲೀಲಾವತಿ, ಶಂಕರ್‌ಭಟ್, ಬಿ.ಎಸ್.ಪ್ರಕಾಶ್ ಇತರರಿದ್ದರು.
ನಂತರ ಡಿಜಿಟಲ್ ಮೀಡಿಯ ಪ್ರೆಸ್‌ಕ್ಲಬ್ ಸಾಗರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಚಿಂತಕ ಕೆ.ಪಿ.ಸುರೇಶ್ ಸನಾತನ ಧರ್ಮ ಎಂದರೇನು, ಸನಾತನ ಧರ್ಮದ ಮೂಲ ಉದ್ದೇಶ, ವರ್ಣಾಶ್ರಮ ಧರ್ಮದ ರಕ್ಷಣೆಯಾಗಿದ್ದು, ಅದನ್ನು ಪುರಾಣದ ಕಥೆಗಳ ಮೂಲಕ ಇತರ ಸಮುದಾಯಗಳ ತಲೆಗೆ ತುಂಬಿ ಗಾಢವಾದ ನಂಬಿಕೆ ಬೆಳೆಸಿದೆ. ಜಾತಿ ಶ್ರೇಷ್ಠತೆಯ ನೆಲೆಯಲ್ಲಿಯೂ ಈ ನಂಬಿಕೆ ಬೆಳೆಸಲಾಗಿದೆ. ಯಾವುದೋ ಒಂದು ಜಾತಿ ಶ್ರೇಷ್ಠವಾದುದು ಎಂಬ ಹುಸಿ ನಂಬಿಕೆಯನ್ನು ಗಾಢವಾಗಿಸಿದೆ ಎಂದರು.
ಡಿಜಿಟಲ್ ಮೀಡಿಯ ಪ್ರೆಸ್ ಕ್ಲಬ್‌ನ ಅಧ್ಯಕ್ಷ ರಾಘವೇಂದ್ರ, ಸಾಕ್ಷಿ ಸಾಗರ್, ಎಲ್.ಜಿ.ನಾಗರಾಜ್, ಉಮಾಮಹೇಶ್ವರ್, ಕಬೀರ್ ಚಿಪ್ಪಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net