ವಿಜಯವಾಣಿ ಸುದ್ದಿಜಾಲ ಕೋಲಾರ
ಕಳೆದ ಒಂದು ತಿಂಗಳಿನಿAದ ಸೇವಂತಿಗೆ ಮತ್ತು ಚೆಂಡು ಹೂವಿನ ಬೆಲೆ ಕುಸಿದಿದ್ದು, ಪಿತೃ ಪಕ್ಷಗಳು ಮುಗಿದ ನಂತರ ಸ್ವಲ್ಪ ಮಟ್ಟಿಗೆ ಹೂವಿನ ಬೆಲೆಯಲ್ಲಿ ಸುಧಾರಣೆ ಕಂಡಿತು. ಇನ್ನೇನು ದಸರಾ ಸಮೀಪಿಸುತ್ತಿರುವಾಗಲೇ ಹೂವಿಗೆ ಬೆಲೆ ಬರುತ್ತದೆಂದು ಬೆಳೆಗಾರರು ಅಂದುಕೊAಡಿದ್ದರು. ಕಳೆದ ೨-೩ ದಿನಗಳಿಂದ ಮಳೆ ಬೀಳುತ್ತಿರುವುದರಿಂದ ಗುಣಮಟ್ಟದ ಹೂವು ಮಾರುಕಟ್ಟೆಯಲ್ಲಿ ಇಲ್ಲದ ಕಾರಣ ಮತ್ತೆ ಬೆಲೆ ಕುಸಿಯತೊಡಗಿದೆ.
ಕಳೆದ ಒಂದು ವಾರದಿಂದ ಹೂವಿನ ಬೆಲೆ ಸೇವಂತಿಗೆ ೧೫೦ ರೂ.ಗಳ ತನಕ ಮಾರಾಟವಾಯಿತು. ಚೆಂಡು ಹೂವು ೪೦ ರಿಂದ ೫೦ ರೂ.ಗಳ ತನಕ ಮಾರಾಟವಾಗುತ್ತಿತ್ತು. ಕಳೆದ ೩-೪ ದಿವಸಗಳಿಂದ ಜಿಲ್ಲೆಯಲ್ಲಿ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಬೀಳುತ್ತಿರುವುದರಿಂದ ತೇವಾಂಶ ಹೆಚ್ಚಾಗಿ ಗುಣಮಟ್ಟದ ಹೂವು ಸಿಗದೇ ಇರುವುದರಿಂದ ಮತ್ತೆ ಸೇವಂತಿಗೆ ಹೂವಿನ ಬೆಲೆ ೬೦ ರಿಂದ ೫೦ ರೂ.ಗಳಿಗೆ ಕುಸಿದಿದ್ದು, ಚೆಂಡು ಹೂವು ೧೦ ರಿಂದ ೧೫ ರೂ.ಗಳಿಗೆ ಮಾರಾಟವಾಗುತ್ತಿದೆ.
ರೈತನಿಗೆ ಮಳೆ ಇಲ್ಲದಿದ್ದರೂ ಕಷ್ಟ, ಮಳೆ ಬಂದರೂ ಕಷ್ಟ ಎನ್ನುವಂತೆ ಆಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಒಂದಲ್ಲಾ ಒಂದು ರೀತಿಯಲ್ಲಿ ನಷ್ಟವು ಆಗುತ್ತಲೇ ಇದೆ. ಕಳೆದ ೨ ದಿನಗಳಿಂದ ಮಳೆ ಇಲ್ಲದೆ ಮಳೆಯಾಶ್ರಿತ ಬೆಳೆಗಳು ಒಣಗಿ ಹೋಗಿದ್ದವು. ಕಳೆದ ೩ ದಿನಗಳಿಂದ ಬೀಳುತ್ತಿರುವ ಸ್ವಲ್ಪ ಮಳೆಯಿಂದ ಸ್ವಲ್ಪ ಮಟ್ಟಿಗೆ ಬೆಳೆಗಳು ಚೇತರಿಸಿಕೊಂಡಿವೆ.
ಶ್ರಾವಣ, ಗೌರಿ-ಗಣೇಶ ಮತ್ತು ದಸರಾ ಹಬ್ಬವನ್ನು ನಂಬಿ ಸೇವಂತಿಗೆ ಮತ್ತು ಚೆಂಡು ಹೂವನ್ನು ಬೆಳೆದಿದ್ದ ಹೂ ಬೆಳೆಗಾರರಿಗೆ ಗೌರಿ-ಗಣೇಶ ಹಬ್ಬದ ನಂತರ ಬೆಲೆ ಕುಸಿದ ಕಾರಣ ರೈತರು ಕಂಗಾಲಾಗಿ ಹೋಗಿದ್ದರು. ದಸರಾಗೆ ಉತ್ತಮ ಬೆಲೆ ಬರುತ್ತದೆಂದು ನಂಬಿದ್ದರು. ಕಳೆದ ಒಂದು ವಾರದಿಂದ ಸ್ವಲ್ಪ ಮಟ್ಟಿಗೆ ಬೆಲೆಯಲ್ಲಿ ಸುಧಾರಣೆ ಕಂಡಿತ್ತಾದರೂ ಮಳೆಯಿಂದಾಗಿ ಮತ್ತೆ ಬೆಲೆ ಕುಸಿಯುವಂತೆ ಆಗಿದೆ.
ಕಟಾವಿಗೆ ಬಂದಿರುವ ಸೇವಂತಿಗೆ ಮತ್ತು ಚೆಂಡು ಹೂವಿಗೆ ಮಳೆ ಬಿದ್ದರೆ ಹೂವಿನಲ್ಲಿ ನೀರಿನಾಂಶ ಸೇರಿಕೊಂಡು ಹೂವಿನ ಬಣ್ಣ ಬದಲಾವಣೆಯಾಗಿ ಕೊಳೆಯುವ ಸ್ಥಿತಿಗೆ ತಲುಪುತ್ತದೆ. ಅಂತಹ ಹೂವಿಗೆ ಮಾರುಕಟ್ಟೆಯಲ್ಲಿ ಬೆಲೆಯು ಸಿಗುವುದಿಲ್ಲ.
ರೈತರು ಒಂದು ದಿವಸ ಮುಂಚಿತವಾಗಿ ಹೂವನ್ನು ಕಟಾವು ಮಾಡಿ, ಆರಿಸಿ ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ ಅದು ಬಾಡಿದಂತೆ ಕಾಣಿಸುತ್ತಿರುವುದರಿಂದ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.
ಕೋಟ್
ದಸರಾ ಹಬ್ಬಕ್ಕೆ ಇನ್ನೇನು ಕೇವಲ ೪ ದಿನಗಳು ಮಾತ್ರ ಬಾಕಿ ಇದ್ದು, ಸೇವಂತಿಗೆ ಮತ್ತು ಚೆಂಡು ಹೂವಿಗೆ ಉತ್ತಮ ಬೆಲೆ ಬರುತ್ತದೆ ಅಂದುಕೊAಡಿದ್ದೆವು. ಕೆ.ಜಿ. ಒಂದಕ್ಕೆ ೩೦೦ ರಿಂದ ೫೦೦ ರೂ.ಗಳ ತನಕ ಮಾರಾಟವಾಗುತ್ತದೆ ಎಂದುಕೊAಡಿದ್ದೆವು. ಕಳೆದ ೩ ದಿನಗಳಿಂದ ಬೀಳುತ್ತಿರುವ ಮಳೆಯಿಂದ ತೇವಾಂಶ ಹೆಚ್ಚಾಗಿ ತೋಟಗಳಲ್ಲಿಯೇ ಹೂವು ಕೊಳೆಯುವಂತೆ ಆಗುತ್ತಿದೆ. ಈಗಾಗಲೇ ಮಳೆಯಿಂದ ಅರ್ಧದಷ್ಟು ಹೂವಿನ ತೋಟಗಳಲ್ಲಿಯೇ ಕೊಳೆತು ಹೋಗಿದೆ. ಮಳೆ ಇಲ್ಲದೆ ಇದ್ದರೆ ಇರುವ ಹೂವಿಗೆ ಉತ್ತಮ ಬೆಲೆ ಬರುತ್ತದೆ.
-ಸಂಪತ್‌ಕುಮಾರ್, ಕಿತ್ತಂಡೂರು, ರೈತ.
ಕೋಟ್
ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ದಸರಾ ಹಬ್ಬಕ್ಕಾದರೂ ಹೂವಿನ ಬೆಲೆ ರೈತರ ಕೈ ಹಿಡಿಯುತ್ತದೆ ಅಂದುಕೊAಡಿದ್ದೆವು. ಮಳೆ ಅವಶ್ಯಕತೆ ಇತ್ತು. ಆದರೆ ಹೂವಿನ ಬೆಳೆಗೆ ಅವಶ್ಯಕತೆ ಇರಲಿಲ್ಲ. ನಾಲ್ಕೆöÊದು ದಿವಸ ಮಳೆ ಹಿಂದಕ್ಕೆ ಹೋಗಿದ್ದರೆ ಹೂವು ಬೆಳೆಗಾರರು ಸಂಕಷ್ಟದಿAದ ಪಾರಾಗುತ್ತಿದ್ದರು.
-ಅಮರೇಂದ್ರ ಮೌನಿ, ರೈತ, ಬೇತಮಂಗಲ
ಚಿತ್ರ ೦೬ ಕೆ.ಎಲ್.ಆರ್. ೦೧ : ಸೇವಾಂಶ ಹೆಚ್ಚಾಗಿರುವ ಕಾರಣ ಚೆಂಡು ಹೂವನ್ನು ಕೀಳದೆ ತೋಟದಲ್ಲಿಯೇ ಬಿಟ್ಟಿರುವುದು. ಚಿತ್ರ ೦೬ ಕೆ.ಎಲ್.ಆರ್. ೦೧ಎ : ಸಂಪತ್‌ಕುಮಾರ್, ಕಿತ್ತಂಡೂರು ರೈತ ರವರ ಭಾವಚಿತ್ರ
ಚಿತ್ರ ೦೬ ಕೆ.ಎಲ್.ಆರ್. ೦೧ಬಿ : ಅಮರೇಂದ್ರ ಮೌನಿ, ರೈತ, ಬೇತಮಂಗಲ ರವರ ಭಾವಚಿತ್ರ