ಮರಳು ಮಾಫಿಯಾಗೆ ಪೇದೆ ಬಲಿ!

Published on

ತನಿಖೆಗೆ ಉಸ್ತುವಾರಿ ಸಚಿವ ಪ್ರಿಯಾಂಕ್ ಸೂಚನೆ

ಕಲಬುರಗಿ

ಅಕ್ರಮ ಮರಳು ಸಾಗಣೆ ತಡೆಗೆ ಯತ್ನಿಸಿದ ಪೊಲೀಸ್ ಮುಖ್ಯ ಪೇದೆ ಮೇಲೆ ಟ್ರ್ಯಾಕ್ಟರ್ ಹಾಯಿಸಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನಾರಾಯಣಪುರ ಹತ್ತಿರ ಗುರುವಾರ ರಾತ್ರಿ ಜರುಗಿದೆ.

ನೆಲೋಗಿ ಠಾಣೆ ಮುಖ್ಯ ಪೇದೆ ಮಯೂರ ರಾಠೋಡ್( 51) ಮರುಳು ಮಾಫಿಯಾ ಕಿಡಿಗೇಡಿಗಳಿಗೆ ಬಲಿಯಾದವರು.

ಕಳೆದ ರಾತ್ರಿ ಭೀಮಾ ನದಿಯಿಂದ ಅಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ತಡೆಯಲು ಯತ್ನಿಸಿದ ಪೇದೆ ಮಯೂರ ರಾಠೋಡ್ ಹಾಗೂ ಪ್ರಮೋದ. ನಾರಾಯಣಪುರ ಬಳಿ ಟ್ರ್ಯಾಕ್ಟರ್ ತಡೆಯಲು ಯತ್ನಿಸಿದಾಗ ಇವರಿದ್ದ ಬೈಕ್ ಮೇಲೆ ಟ್ರ್ಯಾಕ್ಟರ್ ಹಾಯಿಸಲಾಗಿದೆ. ಮಯೂರ ಸ್ಥಳದಲ್ಲಿ ಸಾವನ್ನಪ್ಪಿದ್ದು, ಪ್ರಮೋದ್ ಬಚಾವ್ ಆಗಿದ್ದಾರೆ.

ಮಯೂರ ಅಫಜಲಪುರ ತಾಲ್ಲೂಕಿನ ಚೌಡಾಪುರ ತಾಂಡಾ ನಿವಾಸಿ. ನೆಲೋಗಿ ಠಾಣೆಯಲ್ಲಿ ಕೇಸ್‌. ಘಟನೆ ಸಂಬಂಧ ಸಿದ್ದಪ್ಪ ಎಂಬಾತನ ಬಂಧನ. ಸಾಯಿಬಣ್ಣ ಇತರರು ಪರಾರಿ.

ತನಿಖೆಗೆ ಸಚಿವ ಪ್ರಿಯಾಂಕ್ ಸೂಚನೆ

ಘಟನೆ ಖಂಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಈ ಬಗ್ಗೆ ಸಮಗ್ರ ತನಿಖೆ ಹಾಗೂ ಮರಳು ಮಾಫಿಯಾ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮಾತಾಡಿರುವೆ. ಜಿಲ್ಲೆಯಲ್ಲಿ ಅಕ್ರಮ ಮರುಳು ಸಾಗಣೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈಗಾಗಲೇ ಕಂದಾಯ ಹಾಗೂ ಪೊಲೀಸ್ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದ್ದರೂ ಈ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಂಬಂಧಿಸಿದ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಆದೇಶ ನೀಡಿ ಈ ಕೂಡಲೇ ಅಕ್ರಮ ಮರುಳು ಸಾಗಣೆ ವಿರುದ್ದ ಕಾನೂನು ಕ್ರಮ ಜರುಗಿಸಲು ನಿರ್ದೇಶಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net