ಮನೆ, ಮನಗಳಿಗೂ ಕನ್ನಡ ಸಾಹಿತ್ಯ ಪಸರಿಸಲಿ

09bnk1 kasapa
ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಮತ್ತು ಕಾಫಿ ನಾಡು ಸಮಾಜ ಸೇವಾ ಸಂಘದಿಂದ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಎಂ.ಎಸ್.ನಾಗರಾಜ್, ನಂದೀಶ್ ಬಂಕೇನಹಳ್ಳಿ , ದೀಪಕ್ ದೊಡ್ಡಯ್ಯ. ನವೀನ್, ರಮ್ಯಾ ಇತರರಿದ್ದರು.
Published on

ಬಣಕಲ್: ಮನೆಯಂಗಳದ ಸಾಹಿತ್ಯ ಸಂಜೆಯಂತಹ ಕಾರ್ಯಕ್ರಮಗಳಿಂದ ಸಾಹಿತ್ಯವನ್ನು ಮನೆ ಮತ್ತು ಮನಗಳಿಗೂ ತಲುಪಿಸಲು ಸಾಧ್ಯ ಎಂದು ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಎಸ್.ನಾಗರಾಜ್ ಹೇಳಿದರು.

ಮೂಡಿಗೆರೆಯ ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಮತ್ತು ಕಾಫಿ ನಾಡು ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬಿಳಗುಳದ ಹಸೈನಾರ್ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಭಿನ್ನವಾದ ಕಾರ್ಯಕ್ರಮಗಳ ಮೂಲಕ ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಸಾಹಿತ್ಯದ ಜ್ಞಾನವನ್ನು ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನ ಮನಗಳಲ್ಲಿ ಬಿತ್ತುವ ಕಾರ್ಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿಯೂ ಕರ್ನಾಟಕದ ಅಗ್ರಮಾನ್ಯ ಕವಿಗಳ ಪುಸ್ತಕಗಳ ಕಥಾ ನಿರೂಪಣೆಯನ್ನು ನಿರಂತರ ಮಾಡುವ ಮೂಲಕ ಆ ಕವಿಗಳ ಪುಸ್ತಕದ ಪರಿಚಯ ಎಲ್ಲರಿಗೂ ಮಾಡುವ ಪ್ರಯತ್ನ ಮಾಡಲಾಗುವುದು ಎಂದರು. ಉದ್ಘಾಟನೆಯನ್ನು ಕೆ.ಮಂಚೇಗೌಡರು ನೆರವೇರಿಸಿದರು. ಕನ್ನಡ ಭಾಷೆಯ ಸ್ಥಿತಿಗತಿ ಮತ್ತು ಸವಾಲು ವಿಷಯದ ಬಗ್ಗೆ ಪತ್ರಕರ್ತ ಎಚ್.ಎಂ.ಅಮರನಾಥ್ ಉಪನ್ಯಾಸ ನೀಡಿದರು. ತೇಜಸ್ವಿಯವರ ಕರ್ವಾಲೊ ಕೃತಿಯ ಬಗ್ಗೆ ಪತ್ರಕರ್ತ ನಂದೀಶ್ ಬಂಕೇನಹಳ್ಳಿ ಕಥಾ ನಿರೂಪಣೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮೂಡಿಗೆರೆಯ ವಿವಿಧ ಗಾಯಕ ಗಾಯಕಿಯರಿಂದ ಗೀತ ಗಾಯನ ನಡೆಯಿತು. ಜಿ.ಎಸ್.ಶಿವರುದ್ರಪ್ಪನವರ ಕವಿತೆಗಳ ವಾಚನ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರನ್ನು ಗೌರವಿಸಲಾಯಿತು.

ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮಾದರಿಯಾದ ನಂದೀಶ್ ಬಂಕೇನಹಳ್ಳಿ ಮತ್ತು ದೀಕ್ಷಾ ದಂಪತಿಗೆ ಗೌರವಿಸಲಾಯಿತು. ಸಮಾಜ ಸೇವಕ ಹಾಗೂ ಕಾಫಿ ನಾಡು ಸೇವಾ ಸಂಘದ ಅಧ್ಯಕ್ಷ ಹಸೇನರ್ ಬಿಳಗುಳ, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ. ರಾಜ್ಯ ಪ್ರಧಾನ ಕಾರ್ಯದರ್ಶಿ ನವೀನ್, ರಮ್ಯಾ, ಮಗ್ಗಲಮಕ್ಕಿ ಗಣೇಶ್, ನವೀನ್ ಆನೆ ದಿಬ್ಬ, ರವಿ ಕುನ್ನಹಳ್ಳಿ, ಬಕ್ಕಿ ಮಂಜುನಾಥ್, ಬಿ.ಆರ್.ಬಾಲಕೃಷ್ಣ, ಎಚ್.ಎಂ. ಶಾಂತಕುಮಾರ್, ಸಾಹಿತಿ ಡಿ.ಎಂ.ಮಂಜುನಾಥ್ ಸ್ವಾಮಿ, ವಸಂತ್ ಹಾರ್ಗೋಡು, ದೀಕ್ಷಾ ನಂದೀಶ್, ದಾಕ್ಷಾಯಿಣಿ, ವಿದ್ಯಾ, ಇಂಪಾ, ಎಚ್.ಎಂ.ಜಗದೀಶ್, ಜ್ಯೋತಿ ಸಾಲ್ಡಾನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net