

ಅಥಣಿ ಗ್ರಾಮೀಣ: ಮದ್ಯ ಕುಡಿಯದಂತೆ ಪತ್ನಿ ಹಾಗೂ ಮಕ್ಕಳು ಬುದ್ಧಿವಾದ ಹೇಳಿದ್ದಕ್ಕೆ ವಿಷ ಸೇವಿಸಿ ಅಥಣಿ ತಾಲೂಕಿನ ಖೋತನಟ್ಟಿ ಗ್ರಾಮದ ಕೃಷ್ಣಾ ಕದಮ (52) ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ವಿಷ ಸೇವಿಸಿರುವುದನ್ನು ಕಂಡು ಕುಟುಂಬಸ್ಥರು ಅಥಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರುವ ಐಗಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಎಎಸ್‌ಐ ಅರ್ಜುನ ಬಾಡಗಿ, ತನಿಖಾ ಸಹಾಯಕರಾದ ಪಿ.ಸಿ.ಕಂಟಿಗೊಂಡ ಹಾಗೂ ಪ್ರಕಾಶ ಕುರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.