ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ೨೦೨೫ರ ಅಂತಿಮ ಮತದಾರರ ಪಟ್ಟಿಗಳ ಪ್ರಕಟ / ಜಿಲ್ಲೆಯಲ್ಲಿ ಒಟ್ಟು ೧೨,೯೭,೩೮೮ ಮತದಾರರು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯಾದ್ಯಂತ ಅಂತಿಮ ಮತದಾರರ ಪಟ್ಟಿಯನ್ನು ಜ.೬ ರಂದು ಸೋಮವಾರ ಸಂಬAಧಪಟ್ಟ ನಿಗದಿತ ಸ್ಥಳಗಳಲ್ಲಿ ಪ್ರಚುರಪಡಿಸಲಾಗುತ್ತಿದ್ದು, ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಗಳಲ್ಲಿ ಇರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕೆಂದು ಕೋಲಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಎಂ.ಆರ್. ರವಿ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ, ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ ದಿ.೦೧.೦೧.೨೦೨೫ ಕ್ಕೆ ಅನ್ವಯಿಸುವಂತೆ ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ ಒಟ್ಟು ೧೨೯೭೩೮೮ ಮತದಾರರು ಇದ್ದು, ಆ ಪೈಕಿ ೬೪೦೬೦೦ ಪುರುಷ ಮತದಾರರು, ೬೫೬೬೨೬ ಮಹಿಳಾ ಮತದಾರರು ಹಾಗೂ ೧೬೨ ತೃತೀಯ ಲಿಂಗ ಮತದಾರರಿರುತ್ತಾರೆ. ಜಿಲ್ಲೆಯಲ್ಲಿ ಈಗ ಒಟ್ಟು ೧೫೩೮ ಮತಗಟ್ಟೆಗಳಿರುತ್ತವೆ.

ಲಿಂಗಾನುಪಾತವಾರು ಪ್ರತಿ ೧೦೦೦ ಪುರುಷ ಮತದಾರರಿಗೆ ೧೦೨೫ ಮಹಿಳಾ ಮತದಾರರು ಇದ್ದು, ಜನಸಂಖ್ಯಾವಾರು ಮತದಾರರ ಪ್ರಮಾಣ ೧೦೦ ಜನರಿಗೆ ಅನುಪಾತ ೭೨:೫೦ ಮತದಾರರು ಇರುತ್ತಾರೆ. ಕಳೆದ ವರ್ಷದ ಅಂತಿಮ ಮತದಾರರ ಪಟ್ಟಿಗೆ ಹೋಲಿಸಿದರೆ ಈ ವರ್ಷ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೫ ರ ಸಂದರ್ಭದಲ್ಲಿ ಹೊಸದಾಗಿ ೧೫೧೩ ಮತದಾರರು ಮತದಾರರ ಪಟ್ಟಿಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊAಡಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈ ಪರಿಷ್ಕರಣೆ ಅವಧಿಯಲ್ಲಿ ೩೪೫೯ ಯುವ ಮತದಾರರು ಹೊಸದಾಗಿ ನೋಂದಾಯಿಸಿಕೊAಡಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ೨೪೯೪೮ ಯುವ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಒಟ್ಟು ೭೧೨೮ ನಮೂನೆ ೬ ಸ್ವೀಕೃತಿಗಳು, ೬೭೦೨ ವಿವಿಧ ಕಾರಣಗಳಿಂದ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ನಮೂನೆ ೭ ಸ್ವೀಕೃತಿಗಳನ್ನು ನೋಂದಾಯಿಸಲಾಗಿದೆ.

ಅAತಿಮ ಮತದಾರರ ಪಟ್ಟಿಯಲ್ಲಿ ೧೫,೩೨೪ ಹಿರಿಯ ನಾಗರಿಕ ಮತದಾರರಿದ್ದು, ೧೫,೩೫೪ ವಿಶೇಷ ಚೇತನ ಮತದಾರರಿರುತ್ತಾರೆ.

ಎಲ್ಲಾ ತಾಲ್ಲೂಕಿಗಳಿಂದ ಒಟ್ಟು ೬೩ ದುರುಗಳನ್ನು ಸ್ವೀಕರಿಸಿ ಎಲ್ಲವನ್ನು ಪರಿಹರಿಸಲಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ನಮೂನೆ ೬ ಹಾಗೂ ೭ರ ೧೭೮೩೫ ಚುನಾವಣಾ ಗುರುತಿನ ಚೀಟಿ ಗಳನ್ನು ತ್ವರಿತ ಅಂಚೆ ಮೂಲಕ ಅವರವರ ಮನೆಗಳಿಗೆ ತಲುಪಿಸಲಾಗಿದೆ.

ಈ ಎಲ್ಲಾ ಅಂಕಿ ಅಂಶಗಳನ್ನು ಹಾಗೂ ಅಂತಿಮ ಮತದಾರರ ಪಟ್ಟಿಯನ್ನು ಇಂದು ಜಿಲ್ಲೆಯ ಎಲ್ಲಾ ೬ ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರರ ನೋಂದಾಣಾಧಿಕಾರಿಗಳ ಕಚೇರಿಯಲ್ಲಿ ಹಾಗೂ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕ ತಿಳುವಳಿಕೆಗಾಗಿ ಪ್ರಕಟಪಡಿಸಲಾಗಿದೆ ಎಂದು ತಿಳಿಸಿದರು.

ಚಿತ್ರ ೦೬ ಕೆ.ಎಲ್.ಆರ್. ೦೬ : ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net