ಮತದಾನ ಮಾಡಲು ಜಾಗೃತಿ

22 SARAG 3
Published on


ಮೈಸೂರು : ಕಡ್ಡಾಯ ಮತದಾನ ಮಾಡಲು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಶುಕ್ರವಾರ ಪಟ್ಟಣದ 10ನೇ ವಾರ್ಡ್‌ನ ಚೌಡೇಶ್ವರಿ ದೇವಸ್ಥಾನದ ಸಮೀಪ ರಂಗೋಲಿ ಬಿಡುಗಡೆಉ ಮೂಲಕ ಮತದಾನ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಯಿತು.


ಪಪಂ ಮುಖ್ಯಾಧಿಕಾರಿ ಎಸ್.ಎಸ್.ಮಂಜುನಾಥ್ ಮಾತನಾಡಿ, ಮತದಾನ ನಮ್ಮ ಹಕ್ಕಾಗಿದ್ದು, ತಪ್ಪದೇ ಮತ ಚಲಾಯಿಸಬೇಕು. ಪ್ರಜಾಪ್ರಭುತ್ವದ ಬಲವರ್ಧನೆಗೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು. ಪಪಂ ಸಿಬ್ಬಂದಿ ರಾಮು ,ಅರುಣ್, ಪಳಿನಿಸ್ವಾಮಿ, ಶಿವಪ್ರಸಾದ್, ಮೇಘಾ, ಚೈತ್ರಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net