

ಕಲಬುರಗಿ: ಮಣಿಪುರದಲ್ಲಿ ಮೂರು ತಿಂಗಳಿಂದ ನಿರಂತರ ನಡೆದಿರುವ ಹಿಂಸಾಚಾರ ತಡೆಗೆ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಾನವ ಹಕ್ಕುಗಳಿಗಾಗಿ ಅಖಿಲ ಕರ್ನಾಟಕ ಕ್ರೈಸ್ತ ಒಕ್ಕೂಟದವರು ಕಲಬುರಗಿ ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ರಾಬರ್ಟ್ ಮಿರಾಂಡಾ, ಸುರೇಶ ಮಾರ್ಕ್, ಸಿಮೆಯೋನ್ ಸ್ಯಾಮುವೆಲ್, ಡೇವಿಡ್ ನೆಥಾನಿಯಲ್, ಜೋಸೆಫ್ ಪಾಸ್ಟರ್, ಗಣೇಶ ಪಾಸ್ಟರ್, ವಿಜಯ ಕೋರಿ ಇತರರಿದ್ದರು.