

ಬೆಟ್ಟದಪುರ: ಇಂದ್ರಧನುಷ್ ಲಸಿಕೆ ಅಭಿಯಾನದಲ್ಲಿ ಲಸಿಕೆಯನ್ನು ಹಾಕಿಸುವ ಮೂಲಕ ಮಕ್ಕಳನ್ನು ರೋಗಗಳಿಂದ ಮುಕ್ತರಾಗಿಸಬೇಕೆಂದು ಬೆಟ್ಟದತುಂಗ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಪ್ರೀತಿಲಕ್ಷ್ಮೀ ಅರಸ್ ಹೇಳಿದರು.
ಬೆಟ್ಟದಪುರ ಸಮೀಪದ ನಾಗನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಇಂದ್ರಧನುಷ್ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಎಲ್ಲ ತಾಯಂದಿರು ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳಿಗೆ ನಿಗದಿಪಡಿಸಿದ ಲಸಿಕೆಯನ್ನು ತಪ್ಪದೆ ಹಾಕಿಸಬೇಕು. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ವೃದ್ಧಿಯಾಗುವುದರ ಜತೆಗೆ ಆರೋಗ್ಯವಂಥ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಮುಖಂಡರಾದ ದೇವರಾಜು, ರೇಣುಕಾ, ಮಹಾದೇವ್, ಆರೋಗ್ಯ ಸಿಬ್ಬಂದಿ ಸುಮಲತಾ, ಮಂಜು, ಸುಮಾ, ಗಿರಿಜಾ, ಸಾಕಮ್ಮ, ಮಹಾದೇವಮ್ಮ ಇದ್ದರು.