ಮಕ್ಕಳಲ್ಲಿ ಸಂಸ್ಕಾರ ಮೂಡಿಸಿ

12 TKE 1,1 darmika
ತರೀಕೆರೆ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ಸ್ಕಂದ ಮಾತಾ ವಿಪ್ರ ಮಹಿಳಾ ಸಂಘದಿಂದ ಲೋಕ ಕಲ್ಯಾಣಾರ್ಥ ದೇವರಿಗೆ ಕುಂಕುಮಾರ್ಚನೆ ನೆರವೇರಿತು. ಭಾಮಾ, ಭಾಗ್ಯಾ, ವಾಣಿ, ಜ್ಯೋತಿ, ವಿಜಯಾ ಇತರರಿದ್ದರು.
Published on

ತರೀಕೆರೆ: ಮುಂದಿನ ತಿಂಗಳು ನಡೆಯಲಿರುವ ರಥೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ಸ್ಕಂದ ಮಾತಾ ವಿಪ್ರ ಮಹಿಳಾ ಸಂಘದಿಂದ ಲೋಕ ಕಲ್ಯಾಣಾರ್ಥ ದೇವರಿಗೆ ಕುಂಕುಮಾರ್ಚನೆ ನಡೆಯಿತು.

ಸ್ಕಂದ ಮಾತಾ ವಿಪ್ರ ಮಹಿಳಾ ಸಂಘದ ಅಧ್ಯಕ್ಷೆ ಭಾಮಾ ಮಾತನಾಡಿ, ದೇವರ ಅರ್ಚನೆ ಮತ್ತು ಆರಾಧನೆ ಮೂಲಕ ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ ಉಳಿಸಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ. ಈ ಮೂಲಕ ಮುಂದಿನ ಪೀಳಿಗೆಗೆ ಇದರ ಅರಿವು, ಜವಾಬ್ದಾರಿ ಹಸ್ತಾಂತರಿಸುವ ಅನಿವಾರ್ಯತೆ ಇದೆ ಎಂದರು.

ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಮಕ್ಕಳಲ್ಲಿ ಶ್ರದ್ಧಾಭಕ್ತಿ ಹೆಚ್ಚಿಸಿ ಸನ್ಮಾರ್ಗದಲ್ಲಿ ಸಾಗುವಂತೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ಅರ್ಚಕ ಸತ್ಯನಾರಾಯಣ ಭಟ್ ಆಚಾರ್ಯ ದೇವರಿಗೆ ಕುಂಕುಮಾರ್ಚನೆ ನೆರವೇರಿಸಿ ಮಾತನಾಡಿ, ಪೂಜಾ ಕೈಂಕರ್ಯಗಳಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯಲಿದೆ ಎಂದರು. ಸ್ಕಂದ ಮಾತಾ ವಿಪ್ರ ಮಹಿಳಾ ಸಂಘದ ಪದಾಧಿಕಾರಿಗಳಾದ ಭಾಗ್ಯಾ, ವಾಣಿ, ಜ್ಯೋತಿ, ರೇಖಾ, ವಿಜಯಾ, ರೋಹಿಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net