ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ

1skp1 school
Published on

ಶಿಕಾರಿಪುರ: ಮಾನವೀಯ ಮೌಲ್ಯಗಳು ನಮ್ಮ ಬದುಕನ್ನು ಹಸನುಗೊಳಿಸುತ್ತವೆ. ನೈತಿಕತೆ ಎಂಬುದು ಇಂದಿನ ಶಿಕ್ಷಣ ಮತ್ತು ಶಿಕ್ಷಕರಲ್ಲಿ ಇರಬೇಕಾದ ಪ್ರಮುಖ ಅಂಶ ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಸಮನ್ವಯಾಧಿಕಾರಿ ಕುಬೇರಪ್ಪ ಹೇಳಿದರು.

ಕುಮದ್ವತಿ ಕೇಂದ್ರೀಯ ವಸತಿ ಶಾಲೆ ಹಾಗೂ ಪಿಇಎಸ್ ಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ನೈತಿಕತೆ ಮತ್ತು ಸಮಗ್ರತೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇಂದಿನ ಶಿಕ್ಷಣ ಅಂಕಗಳಿಕೆಗೆ ಮಾತ್ರ ಸೀಮಿತವಾಗಿದೆ ಹಾಗೂ ಶಿಕ್ಷಕರ ಕಾರ್ಯ ಕೇವಲ ಔಪಚಾರಿಕ ಎಂದು ಭಾವಿಸಿರುವುದು ಸರಿಯಲ್ಲ. ಸಂಸ್ಕಾರಯುತ ನೆಲೆಗಟ್ಟಿನಲ್ಲಿ ಮಕ್ಕಳ ಭವಿಷ್ಯ ರೂಪಿಸಬೇಕಿದೆ ಎಂದರು.

ಮಕ್ಕಳಿಗೆ ಶಿಕ್ಷಣದ ಮೂಲಕ ರಾಷ್ಟ್ರೀಯತೆ ಜತೆಗೆ ಸಾಮಾಜಿಕ ಕಳಕಳಿ ಮೂಡಿಸಬೇಕು. ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಅಲ್ಲ. ಅದು ಜ್ಞಾನ ಹಾಗೂ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣಕ್ಕಾಗಿ. ನಾವು ಶಿಕ್ಷಣದಲ್ಲಿ ಸಮಾಜಮುಖಿ ಬದುಕನ್ನು ಕಲಿಸಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಅಶೋಕ್, ಅರುಣಾ, ಕೆಆರ್‌ಸಿಎಸ್ ಶಾಲೆ ಪ್ರಾಚಾರ್ಯ ಸಿದ್ದೇಶ್ವರ್, ಉಪಪ್ರಾಚಾರ್ಯ ಪ್ರಶಾಂತ್, ಪಿಇ ಎಸ್ ಶಾಲೆ ಉಪಪ್ರಾಚಾರ್ಯ ಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net